ಇಂಧೋರ್: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ದ್ವಿತೀಯ ಟಿ20 ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾಗೆ ಅಫ್ಘನ್ನರು 173 ರನ್ ಗಳ ಗುರಿ ನೀಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟ್ ಆಯಿತು. ಗುಲ್ಬದೀನ್ ನಯೀಬ್ 57, ನಜ್ಬುಲ್ಲಾ 23, ಕರೀಂ ಜನತ್ 20 ಮುಜೀಬ್ ಉರ್ ರೆಹಮಾನ್ 21 ರನ್ ಸಿಡಿಸಿದರು. ಭಾರತದ ಪರ ಅರ್ಷ್ ದೀಪ್ ಸಿಂಗ್ 3, ರವಿ ಬಿಷ್ಣೋಯ್, ಅಕ್ಸರ್ ಪಟೇಲ್ ತಲಾ 2, ಶಿವಂ ದುಬೆ 1 ವಿಕೆಟ್ ತಮ್ಮದಾಗಿಸಿಕೊಂಡರು.
ಆರಂಭದಿಂದಲೇ ಅಫ್ಘನ್ ಸ್ಪೋಟಕ ಆಟಕ್ಕೆ ಒತ್ತು ನೀಡಿತು. ಓವರ್ 5 ದಾಟುವಷ್ಟರಲ್ಲಿ ತಂಡದ ಮೊತ್ತ 50 ರನ್ ದಾಟಿತ್ತು. ಆದರೆ ಆಗಲೇ 2 ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ನಯೀಬ್ ಬಿರುಸಿನ ಆಟವಾಡಿದರೆ ಕೆಳ ಕ್ರಮಾಂಕದಲ್ಲಿ ರೆಹಮಾನ್ ಸ್ಪೋಟಕ ಇನಿಂಗ್ಸ್ ಆಡುವ ಮೂಲಕ ಪೈಪೋಟಿಕರ ಮೊತ್ತ ದಾಖಲಿಸಲು ನೆರವಾದರು.
ಆದರೆ ಭಾರತದ ಬಲಾಢ್ಯ ಬ್ಯಾಟಿಂಗ್ ಲೈನ್ ಅಪ್ ಈ ಮೊತ್ತವನ್ನು ದಾಟುವ ವಿಶ್ವಾಸವಿದೆ. ಇಂದಿನ ಪಂದ್ಯಕ್ಕೆ ಕೊಹ್ಲಿ ಕೂಡಾ ಕಮ್ ಬ್ಯಾಕ್ ಮಾಡಿರುವುದರಿಂದ ಭಾರತದ ಕಡೆಯಿಂದಲೂ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಬಹುದು.