ನಾಳೆ ಭಾರತದ ಕೋಚ್ ಆಯ್ಕೆಗೆ ಸಂದರ್ಶನ, ಮುಂಚೂಣಿಯಲ್ಲಿ ಕುಂಬ್ಳೆ, ರವಿ ಶಾಸ್ತ್ರಿ

ಸೋಮವಾರ, 20 ಜೂನ್ 2016 (19:56 IST)
ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯು ಮಂಗಳವಾರ (ಜೂನ್ 21)ದಂದು ಕೋಲ್ಕತಾದಲ್ಲಿ ಭಾರತದ ಹೆಡ್ ಕೋಚ್ ಸ್ಥಾನಕ್ಕೆ ಪಟ್ಟಿ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನ ಮಾಡಲಿದ್ದಾರೆ. ಮುಂಬೈ ಕ್ರಿಕೆಟ್ ಕೇಂದ್ರದಲ್ಲಿ ಅತೀ ಗಣ್ಯ ಸಿಎಸಿ ಇದಕ್ಕೆ ಸಂಬಂಧಿಸಿದ ಮೊದಲ ಭೇಟಿ ಮಾಡಲಿದೆ.
 
ಅನಿಲ್ ಕುಂಬ್ಳೆ ಮತ್ತು ರವಿ ಶಾಸ್ತ್ರಿ ಈ ಹುದ್ದೆಗೆ ಮುಂಚೂಣಿಯಲ್ಲಿದ್ದು, ಇನ್ನೂ ಕೆಲವು ಮಾಜಿ ಸಹಆಟಗಾರರಿಂದ ಕಠಿಣ ಪೈಪೋಟಿಯನ್ನು ಅವರು ಎದುರಿಸುವ ಸಾಧ್ಯತೆಯಿದೆ. 
 
 21 ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರನ್ನಾದರೂ ಸಂದರ್ಶನ ಮಾಡುವ ಅಧಿಕಾರ ಸಿಎಸಿಗೆ ನೀಡಲಾಗಿದೆ. ಕುಂಬ್ಳೆ ಮುಂತಾದ ಹೆಸರುಗಳು ಪ್ರಮುಖ ಹುದ್ದೆಗೆ ಬೇಕಾದ ಮಾನದಂಡವನ್ನು ಪೂರೈಸಿಲ್ಲವಾದ್ದರಿಂದ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.

ಕೋಲ್ಕತಾದಲ್ಲಿ ಸಂದರ್ಶನದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಬಹುದು. ಗಂಗೂಲಿ ಅವರು ವೈಯಕ್ತಿಕ ಕಾರಣಗಳಿಂದ ನಗರದ ಹೊರಗೆ ಹೋಗಲು ಸಾಧ್ಯವಾಗದಿದ್ದರಿಂದ ಕೋಲ್ಕತಾದಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಮಂಡಳಿ ಕಾರ್ಯದರ್ಶಿ ಅಜಯ್ ಶಿರ್ಕೆ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ