ಐಪಿಎಲ್ ಕೂಟದ ವೇಳೆ ಆಟಗಾರರಿಗೆ ಕೊರೋನಾ ಬಂದರೆ ಏನು ಮಾಡಲಿದ್ದಾರೆ ಗೊತ್ತಾ?

ಶುಕ್ರವಾರ, 7 ಆಗಸ್ಟ್ 2020 (13:36 IST)
ದುಬೈ: ಯುಎಇನಲ್ಲಿ ಐಪಿಎಲ್ 13 ನೇ ಆವೃತ್ತಿ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಇದಕ್ಕಾಗಿ ಆಗಸ್ಟ್ ಅಂತ್ಯದಲ್ಲೇ ತಂಡಗಳು ಅರಬ್ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿವೆ.


ಅಲ್ಲಿ ಹೋದ ಬಳಿಕ ಕ್ವಾರಂಟೈನ್ ಗೊಳಗಾಗಿ ಬಳಿಕ ತರಬೇತಿಯಲ್ಲಿ ಪಾಲ್ಗೊಳ್ಳಲಿವೆ. ಒಂದು ವೇಳೆ ಟೂರ್ನಮೆಂಟ್ ನಡುವೆ ಕೊರೋನಾ ಕಾಣಿಸಿಕೊಂಡರೆ ಆ ಆಟಗಾರ ಅಥವಾ ಸಿಬ್ಬಂದಿಯನ್ನು ಏನು ಮಾಡಲಾಗುತ್ತದೆ?

ಇದಕ್ಕೆ ಬಿಸಿಸಿಐ ನೀತಿ ನಿಯಮಾವಳಿಯಲ್ಲಿ ವಿವರಣೆ ನೀಡಲಾಗಿದೆ. ಒಂದು ವೇಳೆ ಕೂಟದ ನಡುವೆ ಕೊರೋನಾ ಬಂದರೆ ಅಲ್ಲಿನ ಸ್ಥಳೀಯಾಡಳಿತದ ನಿಯಮವನ್ನು ಅನುಸರಿಸಬೇಕಾಗುತ್ತದೆ. ಕೊರೋನಾ ಪತ್ತೆಯಾದರೆ ಸ್ಥಳೀಯ ಆಸ್ಪತ್ರೆಗೆ ದಾಖಲಾಗಬೇಕು. ಅಲ್ಲಿನ ಸರ್ಕಾರ ರೂಪಿಸಿರುವ ನಿಯಮಗಳನ್ನು ಅನುಸರಿಸಬೇಕು. ತಕ್ಷಣವೇ ಕೊರೋನಾ ಸೋಂಕಿತನ ಸಂಪರ್ಕದಲ್ಲಿ ಬಂದವರನ್ನೂ ಕ್ವಾರಂಟೈನ್ ಗೊಳಪಡಿಸಬೇಕಾಗುತ್ತದೆ. ಕ್ವಾರಂಟೈನ್ ಅವಧಿಯಲ್ಲಿ ಯಾವುದೇ ತರಬೇತಿಯಲ್ಲಿ ಪಾಲ್ಗೊಳ್ಳುವಂತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ