ಐಪಿಎಲ್ 13: ಆಟಗಾರರ ಜತೆ ಕುಟುಂಬಕ್ಕೂ ಯುಎಇಗೆ ಪಯಣಿಸುವ ಅವಕಾಶ

ಗುರುವಾರ, 6 ಆಗಸ್ಟ್ 2020 (12:39 IST)
ಮುಂಬೈ: ಐಪಿಎಲ್ 13 ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಯುಎಇಗೆ ತೆರಳಲಿರುವ ಆಟಗಾರರಿಗೆ ಬಿಸಿಸಿಐ ಕೆಲವು ನೀತಿ ನಿಯಮಗಳನ್ನು ರೂಪಿಸಿದೆ. ಅದರಂತೆ ಆಟಗಾರರ ಮನವಿ ಮೇರೆಗೆ ಕುಟುಂಬಕ್ಕೂ ಯುಎಇಗೆ ತೆರಳುವ ಅವಕಾಶ ನೀಡಿದೆ.


ಕ್ರಿಕೆಟಿಗರು ಮತ್ತು ಸಹಾಯಕ ಸಿಬ್ಬಂದಿಗಳ ಕುಟುಂಬಕ್ಕೂ ಜತೆಗೇ ಪ್ರಯಾಣಿಸಲು ಅವಕಾಶ ನೀಡಿದ್ದು, ಇವರೂ ಆಟಗಾರರ ಜತೆ ಕ್ವಾರಂಟೈನ್ ಗೊಳಗಾಗಬೇಕು.

ಒಂದೂವರೆ ತಿಂಗಳು ಕಾಲ ನಡೆಯಲಿರುವ ಐಪಿಎಲ್ ಕೂಟದಲ್ಲಿ ಸುದೀರ್ಘ ಸಮಯ ಕುಟುಂಬದಿಂದ ದೂರವಾದರೆ ಆಟಗಾರರ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರಬಹುದು ಎಂದು ಕುಟುಂಬದವರಿಗೆ ಅವಕಾಶ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ