ಐಪಿಎಲ್ 2023: ಡೆಲ್ಲಿ-ಪಂಜಾಬ್ ಕಲಿಗಳ ನಡುವೆ ಪಂದ್ಯ

ಶನಿವಾರ, 13 ಮೇ 2023 (08:01 IST)
ನವದೆಹಲಿ: ಐಪಿಎಲ್ 2023 ರಲ್ಲಿ ಇಂದು ಎರಡನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಆಡಿದ 11 ಪಂದ್ಯಗಳಲ್ಲಿ 4 ಗೆಲುವು ಕಂಡಿದೆಯಷ್ಟೇ. ಸತತ ಎರಡು ಗೆಲುವುಗಳ ನಂತರ ಕಳೆದ ಪಂದ್ಯದಲ್ಲಿ ಸಿಕ್ಕ ಸೋಲು ಡೆಲ್ಲಿ ಆತ್ಮವಿಶ್ವಾಸ ಕುಂದಿಸಿರಬಹುದು.

ಇನ್ನು ಪಂಜಾಬ್ ಕಿಂಗ್ಸ್ ತಮಗೆ ಸಿಕ್ಕ ಉತ್ತಮ ಆರಂಭದ ಲಾಭ ಪಡೆಯಲು ವಿಫಲವಾಯಿತು. ಈ ಟೂರ್ನಿಯಲ್ಲಿ 11 ಪಂದ್ಯಗಳಿಂದ 5 ಗೆಲುವು ಕಂಡಿರುವ ಪಂಜಾಬ್ ಸತತ ಎರಡು ಸೋಲುಗಳಿಂದ ಬಸವಳಿದಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ