ಐಪಿಎಲ್ 2023: ಗುಜರಾತ್ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಮುಂಬೈ?

ಶುಕ್ರವಾರ, 12 ಮೇ 2023 (07:00 IST)
ಮುಂಬೈ: ಐಪಿಎಲ್ 2023 ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಇಂದು ಪಂದ್ಯವಾಡಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.

ಗುಜರಾತ್ ಈ ಟೂರ್ನಿಯ ಅತಿ ಪ್ರಬಲ ತಂಡ. ಹಾಲಿ ಚಾಂಪಿಯನ್ ಇದುವರೆಗೆ ಆಡಿದ 11 ಪಂದ್ಯಗಳಿಂದ 8 ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಅತ್ತ ಮುಂಬೈ ಕೂಡಾ ಕಳೆದ ಪಂದ್ಯದಲ್ಲಿ ಗೆಲುವು ಕಂಡಿದ್ದು, ಸುಧಾರಿತ ಪ್ರದರ್ಶನ ತೋರುತ್ತಿದೆ. 11 ಪಂದ್ಯಗಳಿಂದ 6 ಗೆಲುವು ಕಂಡಿರುವ ಮುಂಬೈ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ರೋಹಿತ್ ಪಡೆಗೆ ತವರಿನ ಬಲವಿದೆ. ಆದರೆ ಸತತ ವೈಫಲ್ಯದಿಂದ ಟೀಕೆಗೊಳಗಾಗಿರುವ ರೋಹಿತ್ ಫಾರ್ಮ್ ಕಂಡುಕೊಳ್ಳಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ