ನಿನ್ನೆ ನಡೆಯದ ಐಪಿಎಲ್ 2023 ಫೈನಲ್ ಇಂದು

ಸೋಮವಾರ, 29 ಮೇ 2023 (08:10 IST)
ಅಹಮ್ಮದಾಬಾದ್: ಮಳೆಯಿಂದಾಗಿ ನಿನ್ನೆ ರದ್ದಾಗಿದ್ದ ಐಪಿಎಲ್ 2023 ರ ಫೈನಲ್ ಪಂದ್ಯ ಮೀಸಲು ದಿನವಾದ ಇಂದು ನಡೆಯಲಿದೆ.

ಗುಜರಾತ್ ನ ನರೇಂದ್ರ ಮೋದಿ ಮೈದಾನದಲ್ಲಿ ಫೈನಲ್ ಪಂದ್ಯ ಆಯೋಜಿಸಲಾಗಿತ್ತು. ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿತ್ತು. ಆದರೆ ಮಳೆಯಿಂದಾಗಿ ಟಾಸ್ ಕೂಡಾ ನಡೆಸಲಾಗಲಿಲ್ಲ. ಹೀಗಾಗಿ ಇಂದಿಗೆ ಪಂದ್ಯ ಮುಂದೂಡಲಾಗಿದೆ.

ಇಂದು ಸಂಜೆ 7.30 ಕ್ಕೇ ಪಂದ್ಯ ಆರಂಭವಾಗಲಿದೆ. ನಿನ್ನೆ ಬಿಟ್ಟೂ ಬಿಡದೇ ಸುರಿದ ಮಳೆಯಿಂದಾಗಿ ಮೈದಾನ ಒಣಗಿಸಲು ಸಿಬ್ಬಂದಿಗಳು ಹರಸಾಹಸ ಪಟ್ಟರೂ ಸಾಧ್ಯವಾಗಿರಲಿಲ್ಲ. ಐಪಿಎಲ್ ಫೈನಲ್ ಇತಿಹಾಸದಲ್ಲೇ ಈ ರೀತಿ ಆಗುತ್ತಿರುವುದು ಇದೇ ಮೊದಲು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ