ಐಪಿಎಲ್ 2023 ಫೈನಲ್ ಬೆನ್ನಲ್ಲೇ ಸಿಎಸ್ ಕೆ ಸ್ಟಾರ್ ಆಟಗಾರ ನಿವೃತ್ತಿ

ಭಾನುವಾರ, 28 ಮೇ 2023 (19:26 IST)
ಅಹಮ್ಮದಾಬಾದ್: ಐಪಿಎಲ್ 2023 ರ ಫೈನಲ್ ಪಂದ್ಯ ಗುಜರಾತ್ ಮತ್ತು ಚೆನ್ನೈ ನಡುವೆ ನಡೆಯಲಿದ್ದು, ಮಳೆಯಿಂದಾಗಿ ತಡವಾಗಿದೆ.

ಈ ನಡುವೆ ಸಿಎಸ್ ಕೆ ಪಾಳಯದಿಂದ ಸುದ್ದಿಯೊಂದು ಕೇಳಿಬಂದಿದೆ. ಸಿಎಸ್ ಕೆ ತಂಡದ ಹಿರಿಯ ಆಟಗಾರ ಅಂಬಟಿ ರಾಯುಡುಗೆ ಇದೇ ಕೊನೆಯ ಐಪಿಎಲ್ ಪಂದ್ಯ. ಈ ಪಂದ್ಯದ ಮುಗಿದ ಬಳಿಕ ಐಪಿಎಲ್ ನಿಂದ ನಿವೃತ್ತರಾಗುವುದಾಗಿ ರಾಯುಡು ತಿಳಿಸಿದ್ದಾರೆ.

ಈ ಫೈನಲ್ ಪಂದ್ಯದ ಬಳಿಕ ಅಂಬಟಿ ರಾಯುಡು ಐಪಿಎಲ್ ಗೆ ನಿವೃತ್ತಿ ಹೇಳಲಿದ್ದಾರೆ. 37 ವರ್ಷದ ಅಂಬಟಿ ರಾಯುಡು 2018 ರಿಂದ ಸಿಎಸ್ ಕೆ ತಂಡದ ಭಾಗವಾಗಿದ್ದಾರೆ. ಇದಕ್ಕೆ ಮೊದಲು ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ