ಐಪಿಎಲ್ 2023: ಗುಜರಾತ್ ಗೆ ಮತ್ತೊಂದು ಗೆಲುವಿನ ನಿರೀಕ್ಷೆ
ಗುಜರಾತ್ ಟೈಟನ್ಸ್ ಈವರೆಗೆ ಆಡಿದ 8 ಪಂದ್ಯಗಳ ಪೈಕಿ 6 ರನ್ನು ಗೆದ್ದುಕೊಂಡು ಈ ಕೂಟದ ಪ್ರಬಲ ತಂಡವೆನಿಸಿಕೊಂಡಿದೆ. ಸದ್ಯಕ್ಕೆ ನಂ.1 ಸ್ಥಾನದಲ್ಲಿರುವ ಗುಜರಾತ್ ಇಂದು ದುರ್ಬಲ ಡೆಲ್ಲಿ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ.
ಆದರೆ ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಕೂಟ ಅತ್ಯಂತ ಹೀನಾಯವಾಗಿದೆ. ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 2 ಗೆಲುವು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ ಪಡೆ ಇಂದು ಪ್ರಬಲ ಗುಜರಾತ್ ವಿರುದ್ಧ ಗೆಲ್ಲಲು ಶತಪ್ರಯತ್ನ ಮಾಡಬೇಕಾದೀತು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.