ಐಪಿಎಲ್ 2023: ಕೆಕೆಆರ್ ಗೆ ರಾಜಸ್ಥಾನ್ ಸವಾಲು
ಕೆಕೆಆರ್ ಇದುವರೆಗೆ ಆಡಿದ 11 ಪಂದ್ಯಗಳ ಪೈಕಿ 5 ರಲ್ಲಿ ಗೆಲುವು ಕಂಡಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಪಡೆದ ಥ್ರಿಲ್ಲಿಂಗ್ ಗೆಲುವು ಕೆಕೆಆರ್ ಆತ್ಮವಿಶ್ವಾಸ ಹೆಚ್ಚಿಸಿರುತ್ತದೆ.
ಇನ್ನೊಂದೆಡೆ ರಾಜಸ್ಥಾನ್ ಸತತ ಮೂರು ಸೋಲುಗಳಿಂದ ಕಂಗೆಟ್ಟಿದೆ. ಇದೀಗ ಗೆಲುವಿನ ಒತ್ತಡದಲ್ಲಿದೆ. ಆಡಿದ 11 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿದ್ದರೂ ಇತ್ತೀಚೆಗಿನ ಪಂದ್ಯಗಳಲ್ಲಿ ಕ್ಲಿಕ್ ಆಗದೇ ಇರುವುದು ಸಂಜು ಸ್ಯಾಮ್ಸನ್ ಪಡೆಯ ವಿಶ್ವಾಸ ಕುಗ್ಗಿಸಿದೆ. ಈ ಪಂದ್ಯ ಸಂಜೆ 7.30. ಕ್ಕೆ ಆರಂಭವಾಗಲಿದೆ.