ಐಪಿಎಲ್ 2023: ಕೆಕೆಆರ್-ಪಂಜಾಬ್ ನಡುವೆ ಇಂದಿನ ಪಂದ್ಯ

ಗುರುವಾರ, 4 ಮೇ 2023 (08:50 IST)
ಹೈದರಾಬಾದ್: ಐಪಿಎಲ್ 2023 ರಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ಇಂದಿನ ಪಂದ್ಯ ನಡೆಯಲಿದೆ.

ಕೆಕೆಆರ್ ಗೆ ಹೋಲಿಸಿದರೆ ಪಂಜಾಬ್ ಉತ್ತಮ ಸ್ಥಿತಿಯಲ್ಲಿದೆ. ಪಂಜಾಬ್ ಇದುವರೆಗೆ ಆಡಿದ 9 ಪಂದ್ಯಗಳ ಪೈಕಿ 5 ಗೆಲುವು ಸಂಪಾದಿಸಿದೆ. ಕಳೆದ ಪಂದ್ಯದಲ್ಲಿ ಸಿಕ್ಕ ಗೆಲುವು ಶಿಖರ್ ಧವನ್ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದೆ.

ಇತ್ತ ಕೆಕೆಆರ್ ಪರಿಸ್ಥಿತಿ ಹಾಗಲ್ಲ. ಆಡಿದ 9 ಪಂದ್ಯಗಳ ಪೈಕಿ ಸಿಕ್ಕಿದ್ದು ಕೇವಲ 3 ಗೆಲುವು. ಕಳೆದ ಪಂದ್ಯದಲ್ಲೂ ಕೆಕೆಆರ್ ಗೆ ಸೋಲಾಗಿತ್ತು. ಉತ್ತಮ ಫಿನಿಶರ್ ಗಳಿದ್ದರೂ ತಂಡದಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರುತ್ತಿಲ್ಲ. ಇಂದು ಕೆಕೆಆರ್ ಮೇಲುಗೈ ಸಾಧಿಸುತ್ತಾ ನೋಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ನಡೆಯುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ