ಐಪಿಎಲ್ 2023: ಕೆಕೆಆರ್ ಗೆ ರೋಚಕ ಜಯ

ಶುಕ್ರವಾರ, 5 ಮೇ 2023 (06:20 IST)
ಹೈದರಾಬಾದ್: ಐಪಿಎಲ್ 2023 ರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ 5 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ನಿತೀಶ್ ರಾಣಾ 42, ರಿಂಕು ಸಿಂಗ್ 46 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಆಡನ್ ಮಾರ್ಕರನ್ 41, ಹೆನ್ರಿಚ್ ಕ್ಲಾಸನ್ 36 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ 6 ಎಸೆತಗಳಿಂದ 9 ರನ್ ಬೇಕಾಗಿದ್ದಾಗ ಅತ್ಯುತ್ತಮ ಬೌಲಿಂಗ್ ನಡೆಸಿ 1 ವಿಕೆಟ್ ಕಿತ್ತ ವರುಣ್ ಚಕ್ರವರ್ತಿ ಪಂದ್ಯಶ‍್ರೇಷ್ಠರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ