ಐಪಿಎಲ್ 2023: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಪಾಲಿಗೆ?

ಗುರುವಾರ, 25 ಮೇ 2023 (08:20 IST)
Photo Courtesy: Twitter
ಮುಂಬೈ: ಐಪಿಎಲ್ 2023 ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಸಿಎಸ್ ಕೆ ಫೈನಲ್ ತಲುಪಿದ್ದು ಇನ್ನೊಂದು ತಂಡ ಯಾವುದು ಎಂದು ನಾಳೆ ತೀರ್ಮಾನವಾಗಲಿದೆ.

ಈ ಐಪಿಎಲ್ ನಲ್ಲಿ ಹಲವು ಹೊಸ ಪ್ರತಿಭೆಗಳು ಬೆಳಕಿಗೆ ಬಂದಿವೆ. ಹಲವರು ಹಲವು ದಾಖಲೆಗಳನ್ನು ಮಾಡಿ ಮಿಂಚಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಗರಿಷ್ಠ ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದ ಗೌರವ ಸದ್ಯಕ್ಕೆ ಆರ್ ಸಿಬಿ ಕ್ಯಾಪ್ಟನ್ ಫಾ ಡು ಪ್ಲೆಸಿಸ್ ಅವರದ್ದು. ಪ್ಲೆಸಿಸ್ 14 ಪಂದ್ಯಗಳಿಂದ 730 ರನ್ ಗಳಿಸಿದ್ದಾರೆ. ಗುಜರಾತ್ ಟೈಟನ್ಸ್ ನ ಶುಬ್ಮನ್ ಗಿಲ್ 722 ರನ್ ಗಳಿಸಿದ್ದು ಅಂತಿಮವಾಗಿ ಅವರೇ ಆರೆಂಜ್ ಕ್ಯಾಪ್ ತೊಡುವ ಸಾಧ‍್ಯತೆಯೂ ಇಲ್ಲದಿಲ್ಲ.

ಬೌಲರ್ ಗಳ ಪೈಕಿ ಗರಿಷ್ಠ ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗೌರವ ಪಡೆದಿರುವುದು ಗುಜರಾತ್ ಟೈಟನ್ಸ್ ತಂಡದ ವೇಗಿ ಮೊಹಮ್ಮದ್ ಶಮಿ. ಶಮಿ 26 ವಿಕೆಟ್ ಕಬಳಿಸಿದ್ದಾರೆ. ವಿಶೇಷವೆಂದರೆ ಅವರದೇ ತಂಡದ ಸಹ ಆಟಗಾರ ರಶೀದ್ ಖಾನ್ 25 ವಿಕೆಟ್ ಕಬಳಿಸಿ ಶಮಿಗೆ ಸ್ಪರ್ಧೆ ಒಡ್ಡುತ್ತಿದ್ದಾರೆ. ಇಬ್ಬರಲ್ಲಿ ಒಬ್ಬರು ಅಂತಿಮವಾಗಿ ಪರ್ಪಲ್ ಕ್ಯಾಪ್ ಗೌರವ ಪಡೆಯುವುದು ಖಚಿತ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ