ಐಪಿಎಲ್ 2023: ಡೆಲ್ಲಿ ವಿರುದ್ಧ ಪಂಜಾಬ್ ಗೆ ಗೆಲುವು

ಭಾನುವಾರ, 14 ಮೇ 2023 (06:20 IST)
ನವದೆಹಲಿ: ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 31 ರನ್ ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು. ಪಂಜಾಬ್ ಪರ ಆರಂಭಿಕ ಪ್ರಬಿಸ್ಮರನ್ ಶತಕ ಸಿಡಿಸಿದರು. 65 ಎಸೆತ ಎದುರಿಸಿದ ಅವರು 103 ರನ್ ಗಳಿಸಿದರು. ಉಳಿದವರಿಂದ ಹೇಳಿಕೊಳ್ಳುವ ಆಟ ಬರಲಿಲ್ಲ.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಡೇವಿಡ್ ವಾರ್ನರ್ 54, ಫಿಲಿಪ್ ಸಾಲ್ಟ್‍ 21 ರನ್ ಗಳಿಸಿ ಉತ್ತಮ ಆರಂಭ ನೀಡಿದರಾದರೂ ಬಳಿಕ ಡೆಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಪಂಜಾಬ್ ಪರ ಹರ್ ಪ್ರೀತ್ ಬ್ರಾರ್ 4 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ