ಐಪಿಎಲ್ 2023: ಭರ್ಜರಿ ಬ್ಯಾಟಿಂಗ್ ಮಾಡಿಯೂ ಸೋತ ಆರ್ ಸಿಬಿ
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ವಿರಾಟ್ ಕೊಹ್ಲಿ 55, ಫಾ ಡು ಪ್ಲೆಸಿಸ್ 45, ಲೊಮ್ರೋರ್ 54 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿಗೆ ಆರಂಭಿಕ ಫಿಲಿಪ್ ಸಾಲ್ಟ್ ಅದ್ಭುತ ಇನಿಂಗ್ಸ್ ಮೂಲಕ ಆಸರೆಯಾದರು. ಬಿರುಸಿನ ಆಟಕ್ಕೆ ಕೈ ಹಾಕಿದ ಸಾಲ್ಟ್ 45 ಎಸೆತಗಳಲ್ಲಿ 87 ರನ್ ಚಚ್ಚಿದರು. ಅವರ ವಿಕೆಟ್ ಪಡೆಯುವಷ್ಟರಲ್ಲಿ ತಡವಾಗಿತ್ತು. ಕೊನೆಗೆ ಡೆಲ್ಲಿ 16.4 ಓವರ್ ಗಳಲ್ಲಿಯೇ 3 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ ಗೆಲುವು ಕಂಡಿತು. ಬೃಹತ್ ಮೊತ್ತ ಪೇರಿಸಿಯೂ ಆರ್ ಸಿಬಿ ಸೋತಿದ್ದು ವಿಪರ್ಯಾಸ. ಆರ್ ಸಿಬಿ ನಿನ್ನೆ ಒಟ್ಟು 7 ಬೌಲರ್ ಗಳನ್ನು ಕಣಕ್ಕಿಳಿಸಿತು. ಆದರೂ ಪ್ರಯೋಜನವಾಗಲಿಲ್ಲ.