ಐಪಿಎಲ್ 2023: ಕಿಂಗ್ ಕೊಹ್ಲಿ ಶತಕಕ್ಕೆ ಪ್ರಿನ್ಸ್ ಗಿಲ್ ಠಕ್ಕರ್
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ಆರ್ ಸಿಬಿ ಪರ ಮತ್ತೆ ಕಿಂಗ್ ಕೊಹ್ಲಿ ಸಿಡಿದೆದ್ದು ಈ ಐಪಿಎಲ್ ನಲ್ಲಿ ಸತತ ಎರಡನೇ ಶತಕ ಸಿಡಿಸಿದರು. ಒಟ್ಟು 61 ಎಸೆತ ಎದುರಿಸಿದ ಅವರು 101 ರನ್ ಗಳಿಸಿ ಅಜೇಯರಾಗುಳಿದರು. ಇದು ಐಪಿಎಲ್ ನಲ್ಲಿ ಅವರ 7 ನೇ ಶತಕವಾಗಿತ್ತು. ಈ ಮೂಲಕ ಐಪಿಎಲ್ ನಲ್ಲಿ ಅತ್ಯಧಿಕ ಶತಕ ಗಳಿಸಿದ ದಾಖಲೆ ಮಾಡಿದರು.
ಆದರೆ ಕೊಹ್ಲಿಯ ಭರ್ಜರಿ ಇನಿಂಗ್ಸ್ ಹೊರತಾಗಿಯೂ ಆರ್ ಸಿಬಿ ಬೌಲರ್ ಗಳು ಗುಜರಾತ್ ಗೆ ಕಡಿವಾಣ ಹಾಕಲು ವಿಫಲರಾದರು. ಕಿಂಗ್ ಕೊಹ್ಲಿಯ ಶತಕಕ್ಕೆ ಠಕ್ಕರ್ ಕೊಟ್ಟ ಗುಜರಾತ್ ನ ಪ್ರಿನ್ಸ್ ಶುಬ್ಮನ್ ಗಿಲ್ ಕೇವಲ 52 ಎಸೆತಗಳಿಂದ 8 ಸಿಕ್ಸರ್ ಸಹಿತ ಅಜೇಯ 104 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಅವರಿಗೆ ತಕ್ಕ ಸಾಥ್ ನೀಡಿದ ವಿಜಯ್ ಶಂಕರ್ 53 ರನ್ ಗಳ ಕೊಡುಗೆ ನೀಡಿದರು. ಇದರೊಂದಿಗೆ ಗುಜರಾತ್ 19.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 198 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿ ಆರ್ ಸಿಬಿಯನ್ನು ಟೂರ್ನಿಯಿಂದ ಹೊರದಬ್ಬಿತು.