ಐಪಿಎಲ್ 2023: ಗೆದ್ದ ಮುಂಬೈ, ಹೊರಬಿದ್ದ ರಾಜಸ್ಥಾನ್
ಇದೀಗ ಮುಂದಿನ ಪಂದ್ಯದಲ್ಲಿ ಆರ್ ಸಿಬಿ ಸೋಲುವುದು ಮುಂಬೈಗೆ ಮುಖ್ಯವಾಗಲಿದೆ. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಭರ್ತಿ 200 ರನ್ ಗಳಿಸಿತು. ಕನ್ನಡಿಗ ಮಯಾಂಕ್ ಅಗರ್ವಾಲ್ 83 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈ ನಾಯಕ ರೋಹಿತ್ ಶರ್ಮಾ, ಕ್ಯಾಮರೂನ್ ಗ್ರೀನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 18 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಗುರಿ ಮುಟ್ಟಿತು. ರೋಹಿತ್ 56 ರನ್ ಗಳ ಕೊಡುಗೆ ನೀಡಿದರೆ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರು. ಒಟ್ಟು 47 ಎಸೆತ ಎದುರಿಸಿದ ಅವರು ಅಜೇಯ 100 ರನ್ ಗಳಿಸಿದರು. ತಕ್ಕ ಸಾಥ್ ನೀಡಿದ ಸೂರ್ಯಕುಮಾರ್ ಯಾದವ್ 25 ರನ್ ಗಳಿಸಿ ಔಟಾಗದೇ ಉಳಿದರು. ಇದೀಗ ಮುಂಬೈ ಪ್ಲೇ ಆಫ್ ಕನಸು ಜೀವಂತವಾಗಿರಿಸಿದೆ. ಒಂದು ವೇಳೆ ಇಂದು ಮುಂಬೈ ಸೋತಿದ್ದರೆ ರಾಜಸ್ಥಾನ್ ಗೆ ಪ್ಲೇ ಆಫ್ ಅವಕಾಶವಿತ್ತು. ಮುಂಬೈ ಗೆಲುವಿನೊಂದಿಗೆ ರಾಜಸ್ಥಾನ್ ಟೂರ್ನಿಯಿಂದ ಹೊರಬಿತ್ತು.