ಐಪಿಎಲ್ 2023: ಮಾಜಿ ಫ್ರಾಂಚೈಸಿ ಮುಂಬೈ ಎದುರಿಸಲಿರುವ ಹಾರ್ದಿಕ್ ಪಾಂಡ್ಯ ಪಡೆ

ಮಂಗಳವಾರ, 25 ಏಪ್ರಿಲ್ 2023 (06:50 IST)
ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಇಂದು ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರಸ್ಪರ ಮುಖಾಮುಖಿಯಾಗಲಿದೆ.

ಹಾರ್ದಿಕ್ ಪಾಂಡ್ಯಗೆ ಮುಂಬೈ ತಂಡ ಹೊಸದಲ್ಲ. ಆರಂಭದಲ್ಲಿ ಮುಂಬೈ ಪರ ಆಡುತ್ತಿದ್ದ ಹಾರ್ದಿಕ್ ಗುಜರಾತ್ ತಂಡಕ್ಕೆ ಸೇರ್ಪಡೆಯಾದವರು. ಇನ್ನು, ಗುಜರಾತ್ ತಂಡ ಆರಂಭದಲ್ಲಿ ಅಬ್ಬರಿಸಿದರೂ ಬಳಿಕ ಮಂಕಾಗಿದೆ. ಕಳೆದ ಪಂದ್ಯ ಗೆದ್ದಿದ್ದ ಗುಜರಾತ್ ಅದೇ ಲಹರಿ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.

ಇತ್ತ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಸೋತಿತ್ತು. ಆಡಿದ ಐದು ಪಂದ್ಯಗಳ ಪೈಕಿ ಎರಡು ಸೋಲು, ಮೂರು ಗೆಲುವು ಕಂಡಿರುವ ಮುಂಬೈ ಇಂದು ಮತ್ತೆ ಗೆದ್ದು ತನ್ನ ಪ್ರಾಬಲ್ಯ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ