ಐಪಿಎಲ್ 2024 ಹರಾಜು: ಹಾರ್ದಿಕ್ ಪಾಂಡ್ಯ ಗುಜರಾತ್ ನಲ್ಲೇ ಉಳಿದುಕೊಂಡ್ರಾ? ಮುಂಬೈ ಸೇರಿದ್ರಾ?

ಭಾನುವಾರ, 26 ನವೆಂಬರ್ 2023 (20:31 IST)
ಮುಂಬೈ: ಐಪಿಎಲ್ 2024 ರಲ್ಲಿ ಎಲ್ಲಾ ಫ್ರಾಂಚೈಸಿಗಳೂ ತಮ್ಮ ಉಳಿಸಿಕೊಳ್ಳುವ ಮತ್ತು ರಿಲೀಸ್ ಮಾಡುವ ಆಟಗಾರರ ಪಟ್ಟಿ ಪ್ರಕಟಿಸಿದೆ. ಆದರೆ ಎಲ್ಲರ ಕಣ್ಣು ಈ ಲಿಸ್ಟ್ ನಲ್ಲಿ ಹಾರ್ದಿಕ್ ಪಾಂಡ್ಯ ಮೇಲಿತ್ತು.

ಕಳೆದ ಎರಡು ದಿನಗಳಿಂದ ಹಾರ್ದಿಕ್ ಪಾಂಡ್ಯ ಗುಜರಾತ್ ತೊರೆದು ತಾವು ಮೊದಲಿದ್ದ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಳ್ಳಲಿದ್ದಾರೆ. ಮುಂಬೈ ರೋಹಿತ್ ರನ್ನು ಗುಜರಾತ್ ಗೆ ಬಿಟ್ಟುಕೊಡಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಆದರೆ ಅದೆಲ್ಲವೂ ಈಗ ಸುಳ್ಳಾಗಿದೆ. ಹಾರ್ದಿಕ್ ಪಾಂಡ್ಯರನ್ನು ಗುಜರಾತ್ ತನ್ನಲ್ಲೇ ಉಳಿಸಿಕೊಂಡಿದೆ. ಆ ಮೂಲಕ ಹಾರ್ದಿಕ್ ಮೂರನೇ ಬಾರಿಗೆ ಗುಜರಾತ್ ಟೈಟನ್ಸ್ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ.

ಅತ್ತ ಮುಂಬೈ ಇಂಡಿಯನ್ಸ್ ತನ್ನ ಚಾಂಪಿಯನ್ ನಾಯಕ ರೋಹಿತ್ ಶರ್ಮಾರನ್ನು ಉಳಿಸಿಕೊಂಡಿದೆ. ಹಾಗಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಮುಂಬೈಗೆ ಹೋಗಬಹುದು ಎಂಬ ಊಹಾಪೋಹಗಳು ಹರಿದಾಡುತ್ತಲೇ ಇವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ