ಐಪಿಎಲ್ ನಲ್ಲಿ ಕನ್ನಡಿಗರೇ ಇರುವ ತಂಡ ಸೇರಿಕೊಳ್ಳಲಿರುವ ದ್ರಾವಿಡ್?

ಭಾನುವಾರ, 26 ನವೆಂಬರ್ 2023 (07:18 IST)
ಮುಂಬೈ: ಐಪಿಎಲ್ 2024 ರಲ್ಲಿ ರಾಹುಲ್ ದ್ರಾವಿಡ್ ಕೋಚ್ ಆಗಿ ಪ್ರಮುಖ ಫ್ರಾಂಚೈಸಿಯೊಂದನ್ನು ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಟೀಂ ಇಂಡಿಯಾ ಕೋಚ್ ಹುದ್ದೆ ಅವಧಿ ಮುಗಿದ ಹಿನ್ನಲೆಯಲ್ಲಿ ದ್ರಾವಿಡ್ ಅದೇ ಹುದ್ದೆಗೆ ಪುನರಾಯ್ಕೆ ಬಯಸಿ ಅರ್ಜಿ ಹಾಕಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಐಪಿಎಲ್ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಮಾತು ದಟ್ಟವಾಗಿದೆ.

ಇದೀಗ ಕನ್ನಡಿಗರೇ ಚುಕ್ಕಾಣಿ ಹೊಂದಿರುವ ಲಕ್ನೋ ಫ್ರಾಂಚೈಸಿಗೆ ದ್ರಾವಿಡ್ ಕೋಚ್ ಆಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಲಕ್ನೋಗೆ ಕೆಎಲ್ ರಾಹುಲ್ ನಾಯಕರಾಗಿದ್ದಾರೆ. ಇತ್ತೀಚೆಗೆ ಕನ್ನಡಿಗ ದೇವದತ್ತ ಪಡಿಕ್ಕಲ್ ಕೂಡಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಕೆಎಲ್ ರಾಹುಲ್ ಜೊತೆ ಟೀಂ ಇಂಡಿಯಾದಲ್ಲಿ ಜೊತೆಯಾಗಿ ಕೆಲಸ ಮಾಡಿದ ಅನುಭವ ದ್ರಾವಿಡ್ ಗಿದೆ. ಅಲ್ಲದೆ, ದ್ರಾವಿಡ್ ರನ್ನು ರಾಹುಲ್ ಸ್ಪೂರ್ತಿಯಾಗಿ ನೋಡುತ್ತಾರೆ. ಹೀಗಾಗಿ ಇಬ್ಬರ ಕಾಂಬಿನೇಷನ್ ಲಕ್ನೋಗೆ ಯಶಸ್ಸು ತಂದುಕೊಡಬುದು ಎಂಬ ವಿಶ್ವಾಸವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ