ಐಪಿಎಲ್ 2024: ವೈದ್ಯರ ಮಾತಿಗೂ ಡೋಂಟ್ ಕೇರ್ ಎನ್ನುತ್ತಿರುವ ಎಂಎಸ್ ಧೋನಿ

Krishnaveni K

ಗುರುವಾರ, 9 ಮೇ 2024 (11:20 IST)
ಚೆನ್ನೈ: ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ವಿಕೆಟ್ ಕೀಪರ್ ಬ್ಯಾಟಿಗನಾಗಿ ಆಡುತ್ತಿರುವ ಧೋನಿ ವೈದ್ಯರ ಸಲಹೆಯನ್ನೂ ಧಿಕ್ಕರಿಸಿ ತಮ್ಮ ಆಟ ಮುಂದುವರಿಸಿದ್ದಾರೆ.

ಧೋನಿ ಈ ಐಪಿಎಲ್ ನಲ್ಲಿ ಕಾಲು ನೋವಿನ ನಡುವೆಯೂ ಐಸ್ ಪ್ಯಾಕ್ ಕಟ್ಟಿಕೊಂಡು ಆಡುತ್ತಿದ್ದಾರೆ. ಮಾಂಸಖಂಡಗಳ ಗಾಯಕ್ಕೊಳಗಾಗಿರುವ ಧೋನಿಗೆ ಈಗ ಹೆಚ್ಚು ಓಡಲೂ ಕಷ್ಟವಾಗುತ್ತಿದೆ. ಪಂದ್ಯ ಮುಗಿದ ತಕ್ಷಣ ಕಾಲಿಗೆ ಐಸ್ ಪ್ಯಾಕ್ ಕಟ್ಟಿಕೊಳ್ಳುತ್ತಾರೆ. ಅವರ ಗಾಯ ಗಂಭೀರವಾಗಿದ್ದು ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಧೋನಿ ತಮ್ಮ ಫ್ರಾಂಚೈಸಿ, ಅಭಿಮಾನಿಗಳಿಗಾಗಿ ನೋವು ಮರೆತು ಆಡುತ್ತಿದ್ದಾರೆ.

ಧೋನಿಗೆ ಇದು ಕೊನೆಯ ಐಪಿಎಲ್ ಪಂದ್ಯವೆಂದು ಹೇಳಲಾಗುತ್ತಿದೆ. ಹೀಗಾಗಿ ಏನೇ ನೋವಿದ್ದರೂ ಅದನ್ನು ನುಂಗಿ ಧೋನಿ 20 ಓವರ್ ಗಳ ಕಾಲ ಕೀಪಿಂಗ್ ಮಾಡುತ್ತಾರೆ. ಕಾಲು ನೋವಿನ ಕಾರಣಕ್ಕೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬರುವ ಧೋನಿ ರನ್ ಗಾಗಿ ಓಡದೇ ಸಿಕ್ಸರ್, ಬೌಂಡರಿ ಮೂಲಕವೇ ಇನಿಂಗ್ಸ್ ಕಟ್ಟುತ್ತಿದ್ದಾರೆ.

ಹಾಗಿದ್ದರೂ ಧೋನಿ ವಿಶ್ರಾಂತಿ ಪಡೆಯದೇ ಇರಲು ಕಾರಣವೇನು ಗೊತ್ತಾ? ಧೋನಿ ಪಾಲಿಗೆ ಇದು ಕೊನೆಯ ಐಪಿಎಲ್ ಪಂದ್ಯಾವಳಿಯಾಗಿರಬಹುದು. ಹೀಗಾಗಿ ಇದನ್ನು ಮಿಸ್ ಮಾಡಿಕೊಳ್ಳಲು ಅವರು ಇಷ್ಟಪಡಲ್ಲ. ಇನ್ನೊಂದೆಡೆ ಚೆನ್ನೈ ತಂಡದಲ್ಲಿ ಗಾಯಾಳುಗಳ ಲಿಸ್ಟ್ ಹೆಚ್ಚುತ್ತಿದೆ.ಹೀಗಾಗಿ ಅನಿವಾರ್ಯವಾಗಿ ಧೋನಿ ಆಡುತ್ತಿದ್ದಾರೆ. ಪ್ರತೀ ಪಂದ್ಯದ ವೇಳೆ ನೋವು ನಿವಾರಕ ನುಂಗಿಕೊಂಡೇ ಅವರು ಮೈದಾನಕ್ಕೆ ಇಳಿಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ