ಐಪಿಎಲ್ 2024: ಬಿರುಗಾಳಿಯ ಬ್ಯಾಟಿಂಗ್ ಮಾಡಿ ದಾಖಲೆಗಳ ಸುರಿಮಳೆಗೈದ ಸನ್ ರೈಸರ್ಸ್ ಹೈದರಾಬಾದ್

Krishnaveni K

ಗುರುವಾರ, 9 ಮೇ 2024 (08:44 IST)
ಹೈದರಾಬಾದ್: ಐಪಿಎಲ್ 2024 ರಲ್ಲಿ ಮತ್ತೊಮ್ಮೆ ಸನ್ ರೈಸರ್ಸ್ ಹೈದರಾಬಾದ್ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 10 ವಿಕೆಟ್ ಗಳ ಅಂತರದಿಂದ ದಾಖಲೆಯ ಗೆಲುವು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್ ಗಳಲ್ಲಿ4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಈ ಸಾಧಾರಣ ಮೊತ್ತವನ್ನು ಹೈದರಾಬಾದ್ ನೀರು ಕುಡಿದಷ್ಟೇ ಸಲೀಸಾಗಿ ಬೆನ್ನತ್ತಿತು. ಆರಂಭಿಕರಾದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಕೊನೆಯವರೆಗೂ ಅಜೇಯರಾಗುಳಿದು ತಂಡಕ್ಕೆ ದಾಖಲೆಯ ಗೆಲುವು ಕೊಡಿಸಿದರು. ಟ್ರಾವಿಸ್ ಹೆಡ್ 30 ಎಸೆತಗಳಿಂದ 8 ಸಿಕ್ಸರ್ ಸಹಿತ 89 ರನ್ ಚಚ್ಚಿದರೆ ಅಭಿಷೇಕ್ 28 ಎಸೆತಗಳಿಂದ 6 ಸಿಕ್ಸರ್ ಸಹಿತ 75 ರನ್ ಚಚ್ಚಿದರು. ಇವರಿಬ್ಬರ ಹೊಡೆಬಡಿಯ ಆಟಕ್ಕೆ ಲಕ್ನೋ ಬೌಲರ್ ಗಳು ದಿಕ್ಕಾಪಾಲಾದರು. ಅಂತಿಮವಾಗಿ ಕೇವಲ 9.4 ಓವರ್ ಗಳಲ್ಲೇ ವಿಕೆಟ್ ನಷ್ಟವಿಲ್ಲದೇ ಹೈದರಾಬಾದ್ 167 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಈ ಗೆಲುವಿನೊಂದಿಗೆ ಹೈದರಾಬಾದ್ ದಾಖಲೆಗಳನ್ನು ಪುಡಿಗಟ್ಟಿದೆ. ಪವರ್ ಪ್ಲೇ ಒಳಗೆ ಎರಡು ಬಾರಿ 100 ರನ್ ಗಳಿಸಿದ ದಾಖಲೆ ಹೈದರಾಬಾದ್ ಮಾಡಿತು. 100 ಪ್ಲಸ್ ರನ್ ಚೇಸ್ ಮಾಡುವಾಗ ಹೆಚ್ಚು ಬಾಲ್ ಬಾಕಿ ಇರುವಂತೇ ಗೆದ್ದ ದಾಖಲೆ ಮಾಡಿತು. ಮೊದಲ 10 ಓವರ್ ಗಳಲ್ಲಿ ಇದು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ. ಇನ್ನು ಟ್ರಾವಿಸ್ ಹೆಡ್ ಮೂರನೇ ಬಾರಿಗೆ 20 ಬಾಲ್ ನಲ್ಲಿ ಹೆಚ್ಚು ಬಾರಿ ಫಿಫ್ಟಿ ಪ್ಲಸ್ ರನ್ ಗಳಿಸಿದ ದಾಖಲೆ ಮಾಡಿದರು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್  ಐಪಿಎಲ್ ನಲ್ಲಿ ಕನಿಷ್ಠ ಬಾಲ್ (30 ಬಾಲ್) ತೆಗೆದುಕೊಂಡು 100 ರನ್ ಜೊತೆಯಾಟವಾಡಿದ ದಾಖಲೆ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ