ಐಪಿಎಲ್ 2024: ಐತಿಹಾಸಿಕ ರನ್ ಚೇಸ್ ಮಾಡಿದ ಪಂಜಾಬ್ ಕಿಂಗ್ಸ್

Krishnaveni K

ಶನಿವಾರ, 27 ಏಪ್ರಿಲ್ 2024 (08:24 IST)
Photo Courtesy: Twitter
ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ಐತಿಹಾಸಿಕ ದಾಖಲೆಯಾಗಿದೆ. ಕೆಕೆಆರ್ ತಂಡದ ವಿರುದ್ಧ 262 ರನ್ ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ ಪಂಜಾಬ್ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ಮೊತ್ತ ಯಶಸ್ವಿಯಾಗಿ ಚೇಸ್ ಮಾಡಿದ ದಾಖಲೆ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು. ಸಾಲ್ಟ್ 75, ಸುನಿಲ್ ನರೈನ್ 71, ವೆಂಕಟೇಶ್ ಅಯ್ಯರ್ 39, ಶ್ರೇಯಸ್ ಅಯ್ಯರ್ 28 ರನ್ ಗಳಿಸಿದರು. ಈ ಬೃಹತ್ ಮೊತ್ತ ನೀಡಿ ಪಂಜಾಬ್ ಸೋಲಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು.

ಆದರೆ ಯಾರೂ ನಂಬಲಸಾಧ‍್ಯ ರೀತಿಯಲ್ಲಿ ಪಂಜಾಬ್ ರನ್ ಚೇಸ್ ಮಾಡಿತು. ಇದಕ್ಕೆ ಕಾರಣವಾಗಿದ್ದು ಜಾನಿ ಬೇರ್ ಸ್ಟೋ ಶತಕ, ಪ್ರಭಿಸ್ಮರನ್ ಸಿಂಗ್, ಶಶಾಂಕ್ ಸಿಂಗ್ ಅರ್ಧಶತಕ. ಒಟ್ಟು 48 ಎಸೆತ ಎದುರಿಸಿದ ಜಾನಿ ಬೇರ್ ಸ್ಟೋ 108 ರನ್ ಗಳಿಸಿದರು. ಅವರಿಗೆ ಸಾಥ್ ನೀಡಿದ ಪ್ರಭಿಸ್ಮರನ್ 20 ಎಸೆತಗಳಿಂದ 54 ರನ್ ಚಚ್ಚಿದರು.

ಕೊನೆಯಲ್ಲಿ ಶಶಾಂಕ್ ಸಿಂಗ್ ಅಬ್ಬರಿಸಿದರು. ಕೇವಲ 28 ಎಸೆತ ಎದುರಿಸಿದ ಅವರು 68 ರನ್ ಚಚ್ಚಿದರು. ಇದರೊಂದಿಗೆ ಪಂಜಾಬ್ 18.4 ಓವರ್ ಗಳಲ್ಲಿಯೇ ಕೇವಲ 2 ವಿಕೆಟ್ ಕಳೆದುಕೊಂಡು 262 ರನ್ ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ದಾಖಲೆ ಬರೆಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ