IPL 2024: ಆಕಾಶ್ ಅಂಬಾನಿ ಜೊತೆ ರೋಹಿತ್ ಶರ್ಮಾ ಕಾರಿನಲ್ಲೇ ರಹಸ್ಯ ಮಾತುಕತೆ

Krishnaveni K

ಗುರುವಾರ, 11 ಏಪ್ರಿಲ್ 2024 (11:43 IST)
Photo Courtesy: Twitter
ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದ ಬಳಿಕ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಲೇ ಇವೆ.

ಇದಕ್ಕೆ ಸಾಕ್ಷಿಯೆಂಬಂತೆ ತಂಡದ ಪ್ರದರ್ಶನವೂ ತೀರಾ ಕಳಪೆಯಾಗಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾಗೆ ಬೇರೆ ಫ್ರಾಂಚೈಸಿಗಳು ದೊಡ್ಡ ಆಫರ್ ನೀಡುತ್ತಿವೆ. ಹೀಗಾಗಿ ರೋಹಿತ್ ಮುಂದಿನ ಮೆಗಾ ಹರಾಜಿನಲ್ಲಿ ಮುಂಬೈನಿಂದ ಹೊರಬಂದು ಬೇರೆ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ದಟ್ಟವಾಗಿದೆ.

ಇದರ ನಡುವೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯಕ್ಕೆ ಮೊದಲು ರೋಹಿತ್ ಶರ್ಮಾ ವಾಂಖೆಡೆ ಮೈದಾನಕ್ಕೆ ಐಷಾರಾಮಿ ಕಾರೊಂದರಲ್ಲಿ ಬಂದು ಇಳಿದಿದ್ದಾರೆ. ಈ ಕಾರನ್ನು ಮುಂಬೈ ಮಾಲಿಕ ಆಕಾಶ್ ಅಂಬಾನಿ  ಚಲಾಯಿಸುತ್ತಿದ್ದರು ಎನ್ನಲಾಗಿದೆ.

 
ರೋಹಿತ್ ಮತ್ತು ಆಕಾಶ್ ಕಾರಿನಲ್ಲೇ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ರೋಹಿತ್ ಕಾರಿನ ಮುಂದುಗಡೆ ಕೂತಿದ್ದರು. ಆದರೆ ಡ್ರೈವರ್ ಸೀಟ್ ನಲ್ಲಿದ್ದುದು ಯಾರು ಎಂದು ಸ್ಪಷ್ಟವಾಗಿ ತಿಳಿದಿಲ್ಲವಾದರೂ ಅಲ್ಲಿ ಕೂತಿರುವ ವ್ಯಕ್ತಿಯನ್ನು ನೋಡಿದರೆ ಆಕಾಶ್ ಅಂಬಾನಿಯವರನ್ನೇ ಹೋಲುತ್ತಾರೆ. ಹೀಗಾಗಿ ಇಬ್ಬರೂ ರಹಸ್ಯ ಮಾತುಕತೆ ನಡೆಸಿರಬಹುದು ಎಂಬ ಗುಸು ಗುಸು ಕೇಳಿಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ