ಹೈದರಾಬಾದ್: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡನೇ ಪಂದ್ಯವಾಡಲು ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಎರಡೂ ತಂಡಗಳೂ ಸೋಲು ಅನುಭವಿಸಿತ್ತು.
ಸನ್ ರೈಸರ್ಸ್ ಹೈದರಾಬಾದ್ ಕಳೆದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿಯೂ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಕೊನೆಯ ಹಂತದಲ್ಲಿ ಸೋತಿತ್ತು. ಆದರೆ ಈ ಪಂದ್ಯದಲ್ಲಿ ಹೈದರಾಬಾದ್ ಬೌಲಿಂಗ್ ಕೊಂಚ ಕಳೆಗುಂದಿತ್ತು. ಇದೀಗ ಐಪಿಎಲ್ ನ ದುಬಾರಿ ಆಟಗಾರ ಪ್ಯಾಟ್ ಕುಮಿನ್ಸ್ ತಮ್ಮ ಖ್ಯಾತಿಗೆ ತಕ್ಕ ಆಟವಾಡಬೇಕಿದೆ.
ಟ್ರಾವಿಸ್ ಹೆಡ್, ಮಯಾಂಕ್ ಅಗರ್ವಾಲ್, ಆಡನ್ ಮಾರ್ಕರಮ್ ಮುಂತಾದ ಪ್ರತಿಭಾವಂತರನ್ನು ಹೊಂದಿದ್ದೂ ಹೈದರಾಬಾದ್ ರನ್ ಚೇಸ್ ಮಾಡಲಾಗದೇ ಸೋತಿತ್ತು. ಆದರೆ ಈ ಪಂದ್ಯ ತವರಿನಲ್ಲಿ ನಡೆಯುತ್ತಿರುವುದರಿಂದ ತವರಿನ ಪ್ರೇಕ್ಷಕರ ಬೆಂಬಲದಿಂದ ಗೆಲ್ಲುವ ನಿರೀಕ್ಷೆಯಿದೆ.
ಇತ್ತ ಮುಂಬೈ ಇಂಡಿಯನ್ಸ್ ನದ್ದೂ ಇದೇ ಕತೆ. ಕಳೆದ ಪಂದ್ಯದಲ್ಲಿ ಗೆಲ್ಲಬೇಕಿದ್ದ ಪಂದ್ಯವನ್ನು ತನ್ನ ಕೈಯಾರೆ ಕೈ ಚೆಲ್ಲಿಕೊಂಡಿತ್ತು. ರನ್ ಚೇಸ್ ಮಾಡುವಲ್ಲಿ ಮುಂಬೈ ಎಡವಿತ್ತು. ಆದರೆ ರೋಹಿತ್ ಶರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯರಂತಹ ಘಟಾನುಘಟಿಗಳನ್ನು ಹೊಂದಿರುವ ಮುಂಬೈ ಯಾವಾಗ ಬೇಕಾದರೂ ತಿರುಗಿಬೀಳುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇಂದು ಮೊದಲ ಗೆಲುವು ಪಡೆಯುವ ನಿರೀಕ್ಷೆಯಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.