ಐಪಿಎಲ್ 2024: ಯುವಕರನ್ನೂ ನಾಚಿಸಿದ ಧೋನಿ, ಸಿಎಸ್ ಕೆಗೆ ಎರಡನೇ ಗೆಲುವು

Krishnaveni K

ಬುಧವಾರ, 27 ಮಾರ್ಚ್ 2024 (09:04 IST)
Photo Courtesy: Twitter
ಚೆನ್ನೈ: ಐಪಿಎಲ್ 2024 ರಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸತತ ಎರಡನೇ ಗೆಲುವು ಸಾಧಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧ 63 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಸಿಎಸ್ ಕೆ ಪರ ನಾಯಕ ಋತುರಾಜ್ ಗಾಯಕ್ ವಾಡ್, ರಚಿನ್ ರವೀಂದ್ರ ತಲಾ 46 ರನ್ ಸಿಡಿಸಿದರು. ಕೆಳ ಕ್ರಮಾಂಕದಲ್ಲಿ ಸಿಡಿದ ಶಿವಂ ದುಬೆ 23 ಎಸೆತಗಳಿಂದ 51 ರನ್ ಚಚ್ಚಿದರು. ಗುಜರಾತ್ ಪರ ರಶೀದ್ ಖಾನ್ 2 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಗುಜರಾತ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಅದರಲ್ಲೂ ವಿಶೇವಾಗಿ ಧೋನಿ ಈ ಪಂದ್ಯದಲ್ಲಿ ವಿಕೆಟ್ ಹಿಂದುಗಡೆ ಹಿಡಿದ ಕ್ಯಾಚ್ ಒಂದು ಯುವ ಕ್ರಿಕೆಟಿಗರನ್ನೂ ನಾಚಿಸುವಂತಿತ್ತು. ಆದರೆ ಈ ಪಂದ್ಯದಲ್ಲೂ ಧೋನಿ ಬ್ಯಾಟಿಂಗ್ ಗಿಳಿಯಲಿಲ್ಲ.

ಗುಜರಾತ್ ಪರ ಸಾಯಿ ಸುದರ್ಶನ್ 37, ವೃದ್ಧಿಮಾನ್ ಸಹಾ, ಡೇವಿಡ್ ಮಿಲ್ಲರ್ ತಲಾ 21 ರನ್ ಗಳಿಸಿದರು. ಈ ಪಂದ್ಯದ ಮೂಲಕ ಚೆನ್ನೈ ತಂಡ ಸತತ ಎರಡನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ