ಐಪಿಎಲ್ ಗೆ ಮುನ್ನ ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್

Krishnaveni K

ಮಂಗಳವಾರ, 19 ಮಾರ್ಚ್ 2024 (11:43 IST)
Photo Courtesy: Twitter
ಬೆಂಗಳೂರು: ಐಪಿಎಲ್ 2024 ಆರಂಭಕ್ಕೆ ಮುನ್ನ ಆರ್ ಸಿಬಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಹೊಸ ಕೇಶ ವಿನ್ಯಾಸ ಮಾಡಿಕೊಂಡಿದ್ದಾರೆ.

ಅವರ ಹೇರ್ ಸ್ಟೈಲ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೈಡ್ ಕಟ್ ಜೊತೆಗೆ ಉದ್ದನೆಯ ಕೂದಲು ಬಿಟ್ಟುಕೊಂಡಿರುವ ಕೊಹ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಅವರ ಈ ಫೋಟೋ ನೋಡಿದ ನೆಟ್ಟಿಗರು ನೀವು ಯಾವ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ಎಂದಿದ್ದಾರೆ.

ಹೊಸ ಹೇರ್ ಸ್ಟೈಲ್ ನಲ್ಲಿ ಕೊಹ್ಲಿ ಹೀರೋ ರೀತಿ ಮಿಂಚುತ್ತಿದ್ದಾರೆ. ಅವರ ಈ ಹೇರ್ ಸ್ಟೈಲ್ ನ್ನು ಅಭಿಮಾನಿಗಳು ಫಾಲೋ ಮಾಡುವ ನಿರೀಕ್ಷೆಯಿದೆ. ಈ ಐಪಿಎಲ್ ಕೊಹ್ಲಿ ಪಾಲಿಗೆ ವಿಶೇಷವಾಗಿರಲಿದೆ. ಈಗಾಗಲೇ ಮಹಿಳೆಯರು ಡಬ್ಲ್ಯುಪಿಎಲ್ ಟೂರ್ನಿ ಗೆದ್ದಿರುವುದರಿಂದ ಆರ್ ಸಿಬಿ ಪುರುಷರಿಗೂ ಕಪ್ ಗೆಲ್ಲುವ ಒತ್ತಡ ಹೆಚ್ಚಾಗಿದೆ.

ಅಲ್ಲದೆ, ವಿರಾಟ್ ಕೊಹ್ಲಿ ಇಂದು ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮಕ್ಕೆ ಬರಲಿದ್ದು, ಅವರನ್ನು ನೋಡಲೆಂದೇ ಚಿನ್ನಸ್ವಾಮಿ ಮೈದಾನಕ್ಕೆ ಸಾಕಷ್ಟು ಜನ ಹರಿದುಬರಲಿದ್ದಾರೆ. ಕೊಹ್ಲಿಗೆ ಬೆಂಗಳೂರು ಎರಡನೇ ತವರಿದ್ದಂತೆ. ಇಲ್ಲಿನ ಜನ ಅವರನ್ನು ತಮ್ಮ ಮನೆಗನಂತೇ ಪ್ರೀತಿಸುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ