ಲಕ್ನೋ: ಐಪಿಎಲ್ 2024 ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 33 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಇದಕ್ಕೆ ಕಾರಣವಾಗಿದ್ದು ಯಶ್ ಠಾಕೂರ್ ಭರ್ಜರಿ ಬೌಲಿಂಗ್.
ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು. ಮಾರ್ಕಸ್ ಸ್ಟಾಯ್ನಿಸ್ 58, ನಿಕಲಸ್ ಪೂರನ್ 32, ಆಯುಷ್ ಬದಾನಿ 20 ರನ್ ಗಳ ಕೊಡುಗೆ ನೀಡಿದರು. ನಾಯಕ ಕೆಎಲ್ ರಾಹುಲ್ ನಿಧಾನಗತಿಯ ಬ್ಯಾಟಿಂಗ್ ನಡೆಸಿ 33 ರನ್ ಗಳಿಸಿದ್ದು ಟೀಕೆಗೊಳಗಾಯಿತು.
ಟಿ20 ಕ್ರಿಕೆಟ್ ನಲ್ಲಿ ಈ ಮೊತ್ತ ಬೆನ್ನತ್ತುವುದು ಕಷ್ಟವೇನೂ ಅಲ್ಲ. ಆದರೆ ಗುಜರಾತ್ ಗೆ ಕಂಟಕವಾಗಿದ್ದು ಯಶ್ ಠಾಕೂರ್ ಬೌಲಿಂಗ್. 3.5 ಓವರ್ ಬೌಲಿಂಗ್ ನಡೆಸಿದ ಯಶ್ 30 ರನ್ ನೀಡಿ 5 ವಿಕೆಟ್ ಕಬಳಿಸಿದರು. ಯಶ್ ಬೌಲಿಂಗ್ ನಿಂದಾಗಿ ಗುಜರಾತ್ ಮಧ್ಯಮ ಕ್ರಮಾಂಕ ಕುಸಿಯಿತು.
ಗುಜರಾತ್ ಪರ ಆರಂಭಿಕ ಸಾಯಿ ಸುದರ್ಶನ್ 31, ರಾಹುಲ್ ತೆವಾತಿಯಾ 30 ರನ್ ಗಳಿಸಿದರು. ಉಳಿದವರದ್ದು ಹೇಳಿಕೊಳ್ಳುವಂತಹ ಕೊಡುಗೆಯೇನೂ ಇರಲಿಲ್ಲ. ಇದರೊಂದಿಗೆ ಗುಜರಾತ್ ಐಪಿಎಲ್ ಇತಿಹಾಸದಲ್ಲೇ ಎರಡನೇ ಬಾರಿಗೆ ಆಲೌಟ್ ಆದಂತಾಗಿದೆ. ಅಂತಿಮವಾಗಿ ಗುಜರಾತ್ 18.5 ಓವರ್ ಗಳಲ್ಲಿ 130 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಅತ್ತ ಲಕ್ನೋಗೆ ಹ್ಯಾಟ್ರಿಕ್ ಗೆಲುವು ಸಿಕ್ಕಿತು.