IPL 2025 Final: ಆರ್ ಸಿಬಿ ಜೊತೆಗೆ ಈ ಸಾಲೂ ಫೇಮಸ್... ವಿಶ್ವದಾದ್ಯಂತ ಈಗ ಕನ್ನಡದ್ದೇ ಹವಾ
ಇಷ್ಟು ದಿನವೂ ಆರ್ ಸಿಬಿ ಫ್ಯಾನ್ಸ್ ಎಲ್ಲೇ ಹೋಗಲಿ ಈ ಸಲ ಕಪ್ ನಮ್ದೇ ಎಂಬ ಸ್ಲೋಗನ್ ಹೇಳುತ್ತಿದ್ದರು. ಆದರೆ ಈಗ ಕನ್ನಡ ಇದುವರೆಗೆ ಒಂದು ಅಕ್ಷರ ನುಡಿಯದವರ ಬಾಯಲ್ಲೂ ಇದೇ ಮಾತು ಕೇಳಿಬರುತ್ತಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಕ್ಷಿತಾ ಪ್ರೇಮ್ ಕೂಡಾ ಎಲ್ಲರ ಬಾಯಲ್ಲೂ ಕನ್ನಡದಲ್ಲಿ ಈ ಸಲ ಕಪ್ ನಮ್ದೇ ಎಂದು ಕೇಳಲು ಏನೋ ಒಂಥರಾ ಹೆಮ್ಮೆ ಎಂದಿದ್ದಾರೆ.
ಕೇವಲ ಭಾರತ ಮಾತ್ರವಲ್ಲ, ವಿದೇಶೀಯರೂ ಈಗ ಇದೇ ಸಾಲನ್ನು ಹೇಳುತ್ತಿದ್ದಾರೆ. ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಕೂಡಾ ಈ ಸಲ ಕಪ್ ನಮ್ದು ಎಂದು ಕನ್ನಡದಲ್ಲಿ ಹೇಳಿ ಸಂಭ್ರಮಿಸಿದ್ದರು. ಅಷ್ಟೇ ಅಲ್ಲ ಕೊಹ್ಲಿ ತಮ್ಮ ಆಪ್ತರಾದ ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಗೂ ಇದೇ ಮಾತನ್ನು ಹೇಳಿಸಿದ್ದಾರೆ.
ಕನ್ನಡ ಭಾಷೆ ಈ ರೀತಿಯಾಗಿ ವಿಶ್ವದಾದ್ಯಂತ ಜನರ ಬಾಯಲ್ಲಿ ಕೇಳಲು ಏನೋ ಒಂಥರಾ ಖುಷಿ ಕೊಡುತ್ತಿದೆ. ಆರ್ ಸಿಬಿ ಜೊತೆಗೆ ಕನ್ನಡದ ಈ ಸಾಲುಗಳೂ ಈಗ ಫೇಮಸ್ ಆಗಿಬಿಟ್ಟಿದೆ.