IPL 2025: ನಾಲ್ಕು ವರ್ಷಗಳೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಸೂಪರ್ ಓವರ್: ಕೆಎಲ್ ರಾಹುಲ್ ಅಗ್ರೆಷನ್ ವಿಡಿಯೋ ನೋಡಿ

Krishnaveni K

ಗುರುವಾರ, 17 ಏಪ್ರಿಲ್ 2025 (09:15 IST)
Photo Credit: X
ನವದೆಹಲಿ: ಐಪಿಎಲ್ ಕೂಟದಲ್ಲಿ ನಾಲ್ಕು ವರ್ಷಗಳ ಬಳಿಕ ನಿನ್ನೆಯ ಡೆಲ್ಲಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಮೊದಲ ಸೂಪರ್ ಓವರ್ ಪಂದ್ಯ ನಡೆಯಿತು. ಇದನ್ನು ಗೆದ್ದ ಬಳಿಕ ಕೆಎಲ್ ರಾಹುಲ್ ಅಗ್ರೆಸಿವ್ ಆಗಿ ಸೆಲೆಬ್ರೇಟ್ ಮಾಡಿದ ವಿಡಿಯೋ ವೈರಲ್ ಆಗಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರಾಜಸ್ಥಾನ್ ರಾಯಲ್ಸ್ ಕೂಡಾ 4 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 188 ರನ್ ಗಳಿಸಿತು. ಹೀಗಾಗಿ ಪಂದ್ಯ ಸೂಪರ್ ಓವರ್ ಗೆ ಹೋಗಿದೆ.

ಸೂಪರ್ ಓವರ್ ನಲ್ಲಿ ರಾಜಸ್ಥಾನ್ ಪರ ಹೆಟ್ಮೈರ್ ಮತ್ತು ರಿಯಾನ್ ಪರಾಗ್ ಕಣಕ್ಕಿಳಿದರು. ಮೊದಲ ಬಾಲ್ ನಲ್ಲಿ ರನ್ ಬರಲಿಲ್ಲ, ಎರಡನೇ ಬಾಲ್ ನಲ್ಲಿ ಹೆಟ್ಮೈರ್ ಬೌಂಡರಿ ಗಳಿಸಿದರು. ನಾಲ್ಕನೇ ಬಾಲ್ ನಲ್ಲಿ ರಿಯಾನ್ ಪರಾಗ್ ರನೌಟ್ ಆದರು. ಆರನೇ ಬಾಲ್ ನಲ್ಲಿ ಹೆಟ್ಮೈರ್ ಕೂಡಾ ರನೌಟ್ ಆದರು.  ಅಂತಿಮವಾಗಿ ಡೆಲ್ಲಿಗೆ ಸೂಪರ್ ಓವರ್ ಗೆಲ್ಲಲು 12 ಓವರ್ ಗಳ ಗುರಿ ನೀಡಿತು.

ಡೆಲ್ಲಿ ಪರ ಕೆಎಲ್ ರಾಹುಲ್ ಮತ್ತು ಸ್ಟಬ್ಸ್ ಕಣಕ್ಕಿಳಿದರು. ರಾಹುಲ್ ಒಂದು ಬೌಂಡರಿ ಸಹಿತ ಮೊದಲ ಮೂರು ಬಾಲ್ ನಲ್ಲಿ ಏಳು ರನ್ ಗಳಿಸಿದರು. ಮುಂದಿನ ಎಸೆತವನ್ನು ಎದುರಿಸಿದ ಸ್ಟಬ್ಸ್ ಚೆಂಡನ್ನು ಸಿಕ್ಸರ್ ಗಟ್ಟಿ ಗೆಲುವು ತಂದರು. ಈ ಗೆಲುವಿನ ನಂತರ ಕೆಎಲ್ ರಾಹುಲ್ ಮತ್ತೊಮ್ಮೆ ಅಗ್ರೆಸಿವ್ ಆಗಿ ಸೆಲೆಬ್ರೇಷನ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆರ್ ಸಿಬಿ ವಿರುದ್ಧ ಡೆಲ್ಲಿ ಗೆಲ್ಲಿಸಿದ ಬಳಿಕ ಕೆಎಲ್ ರಾಹುಲ್ ಕಾಂತಾರ ಸ್ಟೈಲ್ ನಲ್ಲಿ ಸೆಲೆಬ್ರೇಷನ್ ಮಾಡಿ ಗಮನಸೆಳೆದಿದ್ದರು.


WHAT A FINISH BY TRISTAN STUBBS. ????

- An IPL Super Over after 4 years. ????pic.twitter.com/lCU7E2fJ6g

— Mufaddal Vohra (@mufaddal_vohra) April 16, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ