IPL 2025: ತವರಿನಲ್ಲಿ ಕಡಿಮೆ ರನ್‌ ಮಾಡಿಯೂ ಗೆದ್ದುಬೀಗಿದ ಪಂಜಾಬ್‌ ಕಿಂಗ್ಸ್‌: ಕೋಲ್ಕತ್ತಕ್ಕೆ ಭಾರೀ ಮುಖಭಂಗ

Sampriya

ಮಂಗಳವಾರ, 15 ಏಪ್ರಿಲ್ 2025 (22:47 IST)
Photo Courtesy X
ಮೊಹಾಲಿ: ಅನುಭವಿ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಮತ್ತು ವೇಗಿ ಮಾರ್ಕೊ ಯಾನ್ಸನ್‌ ದಾಳಿಯ ಬಲದಿಂದ ಪಂಜಾಬ್‌ ಕಿಂಗ್ಸ್‌ ತಂಡವು ಮಂಗಳವಾರ ಐಪಿಎಲ್‌ನ ರೋಚಕ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು 16 ರನ್‌ಗಳಿಂದ ಮಣಿಸಿತು.

ಪಂಜಾಬ್‌ನ ಮೊಹಾಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. 15.3 ಓವರ್‌ಗಳಲ್ಲಿ 111 ರನ್‌ಗಳಿಸಿ ಆಲೌಟ್‌ ಆಯಿತು. ಕೋಲ್ಕತ್ತದ ಗೆಲುವಿಗೆ 112 ರನ್‌ಗಳ ಗುರಿಯನ್ನು ನೀಡಿದೆ.

ಆದರೆ, ಈ ಸುಲಭ ಗುರಿಯನ್ನು ಬೆನ್ನತ್ತಿದ ಹಾಲಿ ಚಾಂಪಿಯನ್‌ ಕೋಲ್ಕತ್ತ ತಂಡಕ್ಕೆ ಆರಂಭದಲ್ಲೇ ಮಾರ್ಕೊ ಯಾನ್ಸನ್‌ ಪಟ್ಟು ನೀಡಿದರು. ನಂತರದಲ್ಲಿ ಯಜುವೇಂದ್ರ ಚಾಹಲ್‌ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಪೆವಿಲಿಯನ್‌ ದಾರಿ ತೋರಿಸಿದರು.

ಅಂಗ್‌ಕೃಶ್‌ ರಘುವಂಶಿ (37) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ಹೀಗಾಗಿ ಕೋಲ್ಕತ್ತ ತಂಡವು 15.1 ಓವರ್‌ಗಳಲ್ಲಿ 95 ರನ್‌ಗಳಿಸಿ ಆಲೌಟ್‌ ಆಯಿತು. ಚಾಹಲ್‌ ನಾಲ್ಕು ವಿಕೆಟ್‌ ಪಡೆದರೆ, ಯಾನ್ಸನ್‌ ಮೂರು ವಿಕೆಟ್‌ ಪಡೆದರು.

ಪಂಜಾಬ್ ಕಿಂಗ್ಸ್ ಆರು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಂತಾಗಿದೆ. ಕೆಕೆಆರ್‌ ತಂಡವು 7 ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋತಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ