IPL 2025: ಕೆಎಲ್ ರಾಹುಲ್ ಇದು ಬರೀ ಸಿಕ್ಸ್ ಅಲ್ಲವೋ, ಲಕ್ನೋ ಮಾಲಿಕನ ಮುಖಕ್ಕೆ ತಪರಾಕಿ: ವಿಡಿಯೋ

Krishnaveni K

ಸೋಮವಾರ, 31 ಮಾರ್ಚ್ 2025 (08:44 IST)
ವಿಶಾಖಪಟ್ಟಣಂ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಿನ್ನೆ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಮೊದಲ ಪಂದ್ಯವಾಡಿದ ಕೆಎಲ್ ರಾಹುಲ್ ಸಿಕ್ಸರ್ ಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಇದು ಲಕ್ನೋ ಮಾಲಿಕರ ಮುಖಕ್ಕೆ ತಪರಾಕಿ ಎಂದಿದ್ದಾರೆ.
 

ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಗೆ ಕಳೆದ ಸೀಸನ್ ನಲ್ಲೇ ಮೈದಾನದಲ್ಲೇ ವಾಗ್ವಾದ ನಡೆಸಿ ಮಾಲಿಕ ಸಂಜೀವ್ ಗೊಯೆಂಕಾ ಅವಮಾನ ಮಾಡಿದ್ದರು. ಕಳೆದ ಮೆಗಾ ಹರಾಜು ವೇಳೆ ರಾಹುಲ್ ರನ್ನು ಕೈ ಬಿಟ್ಟಿದ್ದರು.

ಇದೇ ಸಿಟ್ಟು ಅಭಿಮಾನಿಗಳಲ್ಲಿ ಈಗಲೂ ಇದೆ. ಈ ಬಾರಿ ಡೆಲ್ಲಿ ಪರ ಆಡುತ್ತಿರುವ ರಾಹುಲ್ ನಿನ್ನೆಯ ಪಂದ್ಯದಲ್ಲಿ ಈ ಸೀಸನ್ ನ ಮೊದಲ ಪಂದ್ಯವಾಡಿದ್ದರು. ಬಂದ ಬಾಲ್ ನಲ್ಲೇ ಭರ್ಜರಿ ಸಿಕ್ಸರ್ ಸಿಡಿಸಿ ಪ್ರೇಕ್ಷಕರನ್ನು ರಂಜಿಸಿದ್ದರು.

ಈ ಸಿಕ್ಸರ್ ಬರೀ ಸಿಕ್ಸರ್ ಅಲ್ಲ ಸಂಜೀವ್ ಗೊಯೆಂಕಾರ ಮುಖಕ್ಕೇ ಹೊಡೆದ ಏಟು ಎಂದು ಅಭಿಮಾನಿಗಳು ಬಣ್ಣಿಸಿದ್ದಾರೆ. ರಾಹುಲ್ ಈ ಬಾರಿ ಆರೆಂಜ್ ಕ್ಯಾಪ್ ಗಳಿಸ್ತಾರೆ ನೋಡ್ತಿರಿ ಎಂದು ಅಭಿಮಾನಿಗಳು ಹೇಳಿದ್ದಾರೆ. ಈ ಪಂದ್ಯದಲ್ಲಿ ರಾಹುಲ್ 5 ಎಸೆತ ಎದುರಿಸಿ ಗಳಿಸಿದ್ದು 15 ರನ್.

This six from KL Rahul is a tight slap to goenka ????????https://t.co/H3TasXiEfq

— Vikrant Gupta Parody (@vikrant_ul_haq) March 30, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ