ಕೆಎಲ್ ರಾಹುಲ್ ಗೆ ಮಗುವಾದ ಖುಷಿಯನ್ನು ಡೆಲ್ಲಿ ತಂಡ ಸಂಭ್ರಮಿಸಿದ್ದು ಹೀಗೆ: ಕ್ಯೂಟ್ ವಿಡಿಯೋ

Krishnaveni K

ಮಂಗಳವಾರ, 25 ಮಾರ್ಚ್ 2025 (16:14 IST)
Photo Credit: X
ನವದೆಹಲಿ: ಐಪಿಎಲ್ 2025 ರಲ್ಲಿ ಮೊದಲ ಪಂದ್ಯ ಗೆದ್ದ ಖುಷಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇದರ ಜೊತೆಗೆ ತಂಡದ ಪ್ರಮುಖ ಆಟಗಾರ ಕೆಎಲ್ ರಾಹುಲ್ ಗೆ ಮಗುವಾದ ಖುಷಿಯನ್ನು ಆಟಗಾರರು ಕ್ಯೂಟ್ ಆಗಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
 

ಕೆಎಲ್ ರಾಹುಲ್ ಎಲ್ಲಾ ಸರಿ ಹೋಗಿದ್ದರೆ ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವಾಡಬೇಕಿತ್ತು. ಆದರೆ ಪತ್ನಿ ಹೆರಿಗೆ ಹಿನ್ನಲೆಯಲ್ಲಿ ದಿಡೀರ್ ಆಗಿ ತಂಡ ತೊರೆದು ಮನೆಗೆ ತೆರಳಿದ್ದರು. ನಿನ್ನೆಯ ಪಂದ್ಯ ಗೆದ್ದ ಸಂಭ್ರಮ ಒಂದೆಡೆಯಾದರೆ ಡೆಲ್ಲಿ ಅಭಿಮಾನಿಗಳಿಗೆ ಕೆಎಲ್ ರಾಹುಲ್ ಗೆ ಹೆಣ್ಣು ಮಗುವಾಗಿರುವ ಖುಷಿ ಸುದ್ದಿ ಸಿಕ್ಕಿತ್ತು.

ಹೀಗಾಗಿ ನಿನ್ನೆಯ ಪಂದ್ಯದ ಗೆಲುವಿನ ನಂತರ ಡೆಲ್ಲಿ ಆಟಗಾರರು ಡ್ರೆಸ್ಸಿಂಗ್ ರೂಂನಲ್ಲಿ ಮಗುವನ್ನು ಎತ್ತಿ ಆಡಿಸುವಂತೆ ಸಂಜ್ಞೆ ಮಾಡಿ ರಾಹುಲ್ ಗೆ ವಿಶ್ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ಮತ್ತೊಂದು ಸಂಭ್ರಮ ಎಂದು ಡೆಲ್ಲಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದೆ.

ಇನ್ನು, ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಕೆಎಲ್ ರಾಹುಲ್ ಕೂಡಾ ವಿಡಿಯೋ ನೋಡಿ ಧನ್ಯವಾದ ಸಲ್ಲಿಸಿದ್ದಾರೆ.


 

Cutest video in internet ❣️ ❣️ ❣️
Thanku @DelhiCapitals #KLRahulpic.twitter.com/l2oIF0g5hT

— ????????????????????????????????????ℍ????ℝ (@harsh_hpt) March 25, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ