Virat Kohli:ಪಿಚ್ ಗೆ ನುಗ್ಗಿ ಕಾಲಿಗೆ ಬಿದ್ದಿದ್ದಕ್ಕೆ ವಿರಾಟ್ ಕೊಹ್ಲಿ ಏನು ಏಳಿದ್ರು ಎಂದು ರಿವೀಲ್ ಮಾಡಿದ ಅಭಿಮಾನಿ

Krishnaveni K

ಮಂಗಳವಾರ, 25 ಮಾರ್ಚ್ 2025 (16:47 IST)
ಬೆಂಗಳೂರು: ಮೊನ್ನೆಯಷ್ಟೇ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಅಭಿಮಾನಿಯೊಬ್ಬ ಪಿಚ್ ಗೆ ನುಗ್ಗಿ ವಿರಾಟ್ ಕೊಹ್ಲಿಗೆ ಕಾಲಿಗೆ ಬಿದ್ದ ಫೋಟೋಗಳು ವೈರಲ್ ಆಗಿದ್ದವು. ಕೊಹ್ಲಿ ಏನು ಹೇಳಿದ್ದರು ಎಂದು ಆ ಅಭಿಮಾನಿ ಈಗ ರಿವೀಲ್ ಮಾಡಿದ್ದಾನೆ.
 

ಐಪಿಎಲ್ ನ ಉದ್ಘಾಟನಾ ಪಂದ್ಯದ ವೇಳೆ ಆರ್ ಸಿಬಿ ಬ್ಯಾಟಿಂಗ್ ವೇಳೆ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಅರ್ಧಶತಕ ಸಿಡಿಸಿದ್ದರು. ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದ್ದ ಕೊಹ್ಲಿ ಮುಂದಿನ ಎಸೆತಕ್ಕೆ ರೆಡಿ ಆಗುವಷ್ಟರಲ್ಲಿ ಮೈದಾನದ ಬ್ಯಾರಿಕೇಡ್ ಹತ್ತಿ ಅಭಿಮಾನಿಯೊಬ್ಬ ನೇರವಾಗಿ ಪಿಚ್ ಗೇ ನುಗ್ಗಿದ್ದ.

ಸೀದಾ ಬಂದು ಕೊಹ್ಲಿ ಕಾಲಿಗೆ ಬಿದ್ದಿದ್ದ. ಗಲಿಬಿಲಿಗೊಂಡರೂ ತಕ್ಷಣ ಸಾವರಿಸಿಕೊಂಡ ಕೊಹ್ಲಿ ಆತನನ್ನು ಹಿಡಿದೆತ್ತಿ ಅಪ್ಪುಗೆ ನೀಡಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಗಳು ಆತನನ್ನು ಹಿಡಿದು ಕರೆದೊಯ್ದಿದ್ದಾರೆ.

ಈ ತಪ್ಪಿಗೆ ಆತನನ್ನು ಬಂಧಿಸಿ ಒಂದು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇದೀಗ ತನಗೆ ಕೊಹ್ಲಿ ಅಂದು ಏನು ಹೇಳಿದರು ಎಂಬುದನ್ನು ಆತ ರಿವೀಲ್ ಮಾಡಿದ್ದಾನೆ. ತನ್ನನ್ನು ಮೇಲೆತ್ತಿದ್ದ ಕೊಹ್ಲಿ ‘ಬೇಗ ಇಲ್ಲಿಂದ ಓಡಿ ಹೋಗು’ ಎಂದಿದ್ದರು. ಇನ್ನು ಭದ್ರತಾ ಸಿಬ್ಬಂದಿ ಹಿಡಿದಾಗ, ಆತನಿಗೆ ಹೊಡೆಯಬೇಡಿ ಎಂದು ಅವರಿಗೆ ಮನವಿ ಮಾಡಿದ್ದರು ಎಂದು ಅಭಿಮಾನಿ ಹೇಳಿಕೊಂಡಿದ್ದಾನೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ