IPL 2025: ಸೋತೇ ಹೋಗುತ್ತಿದ್ದ ಪಂದ್ಯದಲ್ಲಿ ಡೆಲ್ಲಿ ಗೆಲ್ಲಿಸಿದ ಆಶುತೋಷ್ ಶರ್ಮಾ ಯಾರು
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಂತಿಮವಾಗಿ ಡೆಲ್ಲಿ 19.3 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಡೆಲ್ಲಿ ರೋಚಕವಾಗಿ 1 ವಿಕೆಟ್ ಗಳಿಂದ ಗೆದ್ದಿತು. ಒಟ್ಟು 31 ಎಸೆತಗಳನ್ನು ಎದುರಿಸಿದ ಅವರು 5 ಬೌಂಡರಿ, 5 ಸಿಕ್ಸರ್ ಗಳೊಂದಿಗೆ ಅಜೇಯ 66 ರನ್ ಗಳಿಸಿದರು.
ಈ ಗೆಲುವಿಗೆ ಕಾರಣವಾಗಿದ್ದು ಆಶುತೋಷ್ ಶರ್ಮ ಎಂಬ 26 ವರ್ಷದ ದೇಶೀಯ ಪ್ರತಿಭೆ. ಮಧ್ಯಪ್ರದೇಶದಲ್ಲಿ ಜನಿಸಿದ ಈ ಯುವ ಪ್ರತಿಭೆ ರೈಲ್ವೇಸ್ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದರು. 2024 ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಬಳಿಕ ಕಳೆದ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು.
ಇದೀಗ ಡೆಲ್ಲಿ ತಂಡಕ್ಕೆ ನಂಬಲಸಾಧ್ಯ ಗೆಲುವು ಗಳಿಸಿ ಕೊಟ್ಟಿದ್ದಾರೆ. ಈಗ ಒಂದೇ ಇನಿಂಗ್ಸ್ ನಿಂದ ಆಶುತೋಷ್ ಹೀರೋ ಆಗಿಬಿಟ್ಟಿದ್ದಾರೆ.