Rahul Dravid: ರಾಹುಲ್ ದ್ರಾವಿಡ್ ಮೇಲೆ ಸಂಜು ಸ್ಯಾಮ್ಸನ್ ಮುನಿಸು: ವಿಡಿಯೋ ವೈರಲ್
ಮೊನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ಸೂಪರ್ ಓವರ್ ನಲ್ಲಿ ಸೋಲುಂಡಿತು. ಈ ಸೋಲಿನ ಬಳಿಕ ನಾಯಕ ಸಂಜು ಸ್ಯಾಮ್ಸನ್ ತೀವ್ರ ಅಸಮಾಧಾನಗೊಂಡಿದ್ದು ಕಂಡುಬಂತು.
ಎಲ್ಲಾ ಆಟಗಾರರನ್ನು ರಾಹುಲ್ ದ್ರಾವಿಡ್ ಒಟ್ಟು ಸೇರಿಸಿ ಮೀಟಿಂಗ್ ಮಾಡುತ್ತಿದ್ದರೆ ಇತ್ತ ಸಂಜು ಸ್ಯಾಮ್ಸನ್ ಮಾತ್ರ ಪ್ರತ್ಯೇಕವಾಗಿ ನಿಂತಿದ್ದರು. ಪಕ್ಕದಲ್ಲಿ ಒಬ್ಬ ಆಟಗಾರ ಸೇರಿಕೊಳ್ಳುವಂತೆ ಹೇಳಿದರೂ ಬೇಡ ಎನ್ನುವಂತೆ ಕೈ ಸನ್ನೆ ಮಾಡಿದ ಸಂಜು ದೂರ ಉಳಿದರು. ಇದು ದ್ರಾವಿಡ್ ಮತ್ತು ಸಂಜು ನಡುವೆ ಎಲ್ಲವೂ ಸರಿಯಲ್ವಾ ಎಂಬ ಅನುಮಾನ ಹುಟ್ಟುಹಾಕಿದೆ.
ಈ ಸೀಸನ್ ನಲ್ಲಿ ಎಲ್ಲಾ ನಿರ್ಧಾರಗಳನ್ನು ರಾಹುಲ್ ದ್ರಾವಿಡ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ಸಂಜು ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಸೂಪರ್ ಓವರ್ ನಲ್ಲಿ ಯಾರನ್ನು ಆಡಿಸಬೇಕು ಎಂಬ ತೀರ್ಮಾನ ದ್ರಾವಿಡ್ ರದ್ದೇ ಆಗಿತ್ತು ಎಂಬ ಊಹಾಪೋಹವಿದೆ. ಇದೆಲ್ಲಾ ಕಾರಣಕ್ಕೆ ಸಂಜು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.