IPL 2025 RCB vs PBKS: ಯಾಕಾದ್ರೂ ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಮ್ಯಾಚ್ ಇರುತ್ತೋ
ಇಂದು ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯವಿದೆ. ಆದರೆ ಪುರುಷರ ಟೀಂ ಮಾತ್ರವಲ್ಲ, ಮಹಿಳೆಯರ ಟೀಂ ಕೂಡಾ ಈ ಸೀಸನ್ ನಲ್ಲಿ ಇದುವರೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಇದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.
ಈ ಬಾರಿ ಐಪಿಎಲ್ ನಲ್ಲಿ ಆರ್ ಸಿಬಿ ಹೊರಗೆ ಹುಲಿ ಮನೆಯೊಳಗೆ ಇಲಿ ಎಂಬ ಉಲ್ಟಾ ಸ್ಥಿತಿಯಲ್ಲಿದೆ. ಎಲ್ಲಾ ತಂಡಗಳೂ ತವರಿನಲ್ಲಿ ಅಬ್ಬರಿಸಿದರೆ ಆರ್ ಸಿಬಿ ಮಾತ್ರ ಮುದುರಿಕೊಂಡಿದೆ. ಪಂಜಾಬ್ ಕಿಂಗ್ಸ್ ಕೂಡಾ ಕಳಪೆ ತಂಡವೇನೂ ಅಲ್ಲ. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 111 ರನ್ ಗಳಿಸಿಯೂ ಅದ್ಭುತವಾಗಿ ಬೌಲಿಂಗ್ ನಡೆಸಿ ಡಿಫೆಂಡ್ ಮಾಡಿ ಗೆದ್ದ ಹುಮ್ಮಸ್ಸಿನಲ್ಲಿದೆ. ಜೊತೆಗೆ ಪಂಜಾಬ್ ಗೆ ಆರ್ ಸಿಬಿ ಮಾಜಿ ಆಟಗಾರ ಯಜುವೇಂದ್ರ ಚಹಲ್ ಬಲವಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್ ಸಿಬಿಗೆ ಟಾಸ್ ಸೋತರೆ ಗೆಲುವು ಕಷ್ಟವಾಗಲಿದೆ. ಇಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ತಂಡವೇ ಗೆಲ್ಲುತ್ತಿರುವುದು ಗಮನಿಸಬೇಕಾದ ಅಂಶ. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.