IPL 2025: ಮಿಂಚಿದ ಅಭಿಷೇಕ್‌ ಶರ್ಮಾ, ಕ್ಲಾಸೆನ್‌: ಮುಂಬೈ ಗೆಲುವಿಗೆ 163 ರನ್‌ ಗುರಿ ನೀಡಿದ ಹೈದರಾಬಾದ್‌

Sampriya

ಗುರುವಾರ, 17 ಏಪ್ರಿಲ್ 2025 (21:26 IST)
Photo Courtesy X
ಮುಂಬೈ: ಅಭಿಷೇಕ್‌ ಶರ್ಮಾ (40 ರನ್‌) ಮತ್ತು ಹೆನ್ರಿಚ್‌ ಕ್ಲಾಸೆನ್‌ (37 ರನ್‌) ಅವರ ಬ್ಯಾಟಿಂಗ್‌ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಐಪಿಎಲ್‌ನ ಪಂದ್ಯದಲ್ಲಿ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 162 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದ ಆತಿಥೇಯ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಹೈದರಾಬಾದ್‌ ತಂಡಕ್ಕೆ ಆರಂಭಿಕ ಆಟಗಾರರಾದ ಅಭಿಷೇಕ್‌ ಮತ್ತು ಟ್ರಾವಿಸ್‌ ಹೆಡ್‌ (28 ರನ್‌) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 59 ರನ್‌ ಸೇರಿಸಿದರು.

ಅವರಿಬ್ಬರ ನಿರ್ಗಮನದ ಬಳಿಕ ಮುಂಬೈ ಬೌಲರ್‌ಗಳು ಹಿಡಿತ ಸಾಧಿಸಿದರು. ಇಶಾನ್‌ ಕಿಶನ್‌ (2) ನಿರಾಸೆ ಮೂಡಿಸಿದರು. ಕೊನೆಯ ಹಂತದಲ್ಲಿ ಹೆನ್ರಿಚ್‌ ತಂಡದ ರನ್‌ ವೇಗವನ್ನು ಹೆಚ್ಚಿಸಿದರು. ಮುಂಬೈ ತಂಡ ಗೆಲುವಿಗೆ 163 ಗುರಿಯನ್ನು ನೀಡಿತು.

ಮುಂಬೈ ತಂಡದ ಪರ ವಿಲ್‌ ಜ್ಯಾಕ್ಸ್‌ ಎರಡು ವಿಕೆಟ್‌ ಪಡೆದರು. ಟ್ರಂಟ್‌ ಬೌಲ್ಟ್‌, ಜಸ್‌ಪ್ರೀತ್‌ ಬೂಮ್ರಾ ಮತ್ತು ಹಾರ್ದಿಕ್‌ ಪಾಂಡ್ಯ ತಲಾ ಒಂದು ವಿಕೆಟ್‌ ಪಡೆದರು.

ಉಭಯ ತಂಡಗಳು ತಲಾ ಆರು ಪಂದ್ಯಗಳಲ್ಲಿ ಆಡಿದ್ದು, ನಾಲ್ಕರಲ್ಲಿ ಮುಗ್ಗರಿಸಿವೆ. ಪಾಯಿಂಟ್‌ ಪಟ್ಟಿಯಲ್ಲಿ ಮುಂಬೈ 7ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್‌ 9ನೇ ಸ್ಥಾನದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ