ಕುರ್ಚಿಯನ್ನು ಒದ್ದ ಗಂಭೀರ್‌ಗೆ ಶೇ. 15ರಷ್ಟು ದಂಡ, ಕೊಹ್ಲಿಗೆ 24 ಲಕ್ಷ ದಂಡ

ಬುಧವಾರ, 4 ಮೇ 2016 (12:21 IST)
ಐಪಿಎಲ್ ಪಂದ್ಯವೊಂದರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಅವರ ಅತಿರೇಕದ ವರ್ತನೆಗಾಗಿ ಅವರ ಪಂದ್ಯ ಶುಲ್ಕದ ಶೇ. 15ರಷ್ಟು ದಂಡವನ್ನು ವಿಧಿಸಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವಿನ ಸಂದರ್ಭದಲ್ಲಿ ಅವರು ಕುರ್ಚಿಯೊಂದನ್ನು ಕಾಲಿನಿಂದ ಒದ್ದಿದ್ದರು.  ವಿರಾಟ್ ಕೊಹ್ಲಿ ಅವರಿಗೆ ನಿಧಾನ ಓವರುಗಳ ಗತಿಯಿಂದಾಗಿ ಎರಡನೇ ಬಾರಿಗೆ 24 ಲಕ್ಷ ರೂ. ದಂಡವನ್ನು ಹೇರಲಾಗಿದೆ. 
 
 ಕೊಹ್ಲಿಗೆ ಮುಂಚಿನ ನಿಧಾನ ಓವರುಗಳಿಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗಿದ್ದರೆ, ಎರಡನೇ ಬಾರಿಗೆ ಎರಡು ಪಟ್ಟು ಹೆಚ್ಚು ದಂಡ ವಿಧಿಸಲಾಗಿದ್ದು, ಕೊಹ್ಲಿ ಈಗ ಒಟ್ಟು 36 ಲಕ್ಷ ರೂ. ದಂಡವನ್ನು ತುಂಬಿದ್ದಾರೆ.
 
 ಟಿವಿ ರೀಪ್ಲೇಯಲ್ಲಿ ಗಂಭೀರ್ ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸಿದ ಕೂಡಲೇ ಹಿಂಸಾತ್ಮಕ ಪ್ರವೃತ್ತಿಯನ್ನು ತೋರಿಸಿ ಕುರ್ಚಿಯನ್ನು ಕಾಲಿನಿಂದ ಒದ್ದರು. ಆ ಕ್ಷಣದ ಉದ್ವೇಗದಲ್ಲಿ ಈ ಆಕ್ರೋಶ ತೋರಿಸಿದ್ದರೂ ಕೂಡ ತಮ್ಮ ತಂಡ ಗೆಲುವಿನ ಹಂತದಲ್ಲಿದ್ದಾಗ ಗಂಭೀರ್ ಕೋಪಗೊಂಡಿದ್ದೇಕೆ ಎನ್ನುವುದು ಕಾಮೆಂಟೇಟರ್‌ಗೆ ಕೂಡ ಬಿಡಿಸಲಾಗದ ಒಗಟಾಗಿ ಪರಿಣಮಿಸಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ