ಐಪಿಎಲ್ ಸೀಸನ್ 13 ಗೆ ಸಮಯ ಫಿಕ್ಸ್! ಕ್ರಿಕೆಟ್ ಜಾತ್ರೆ ಯಾವಾಗ ಗೊತ್ತಾ?

ಗುರುವಾರ, 28 ಮೇ 2020 (09:34 IST)
ಮುಂಬೈ: ಕೊರೋನಾ ಹಾವಳಿಯಿಂದಾಗಿ ಈ ವರ್ಷ ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ನಡೆಯಬೇಕಿದ್ದ ಐಪಿಎಲ್ ಸೀಸನ್ 13 ನಡೆದಿರಲಿಲ್ಲ. ಇದೀಗ ಐಪಿಎಲ್ ನಡೆಸಲು ಮುಹೂರ್ತ ಫಿಕ್ಸ್ ಆಗಿದೆ ಎಂದೇ ಹೇಳಬಹುದು.


ಅಕ್ಟೋಬರ್-ನವಂಬರ್ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಮುಂದೂಡಿಕೆಯಾಗಲಿದ್ದು, ಆ ಅವಧಿಯಲ್ಲಿ ಐಪಿಎಲ್ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಐಸಿಸಿ ವಾರ್ಷಿಕ ಸಭೆಗೂ ಮುನ್ನ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ.

ಈ ವರ್ಷ ನಡೆಯಬೇಕಿದ್ದ ಟಿ20 ವಿಶ್ವಕಪ್ ನ್ನು 2022 ಕ್ಕೆ ಮುಂದೂಡುವ ಸಾಧ‍್ಯತೆಯಿದೆ. 2021 ರ ಅಕ್ಟೋಬರ್ ನಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಮುಂದಿನ ವರ್ಷದ ಆರಂಭದಲ್ಲಿ ಮತ್ತೊಂದು ಟಿ20 ವಿಶ್ವಕಪ್ ಆಯೋಜಿಸಲು ಸಾಧ‍್ಯವಾಗದು.

ಹೀಗಾಗಿ 2022 ರ ಟಿ20 ವಿಶ್ವಕಪ್ ನ್ನು ಆಸ್ಟ್ರೇಲಿಯಾ ಆಯೋಜಿಸಲಿದ್ದು, 2023 ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ