ಕಿಂಗ್ಸ್ ಇಲೆವನ್‌ ವಿರುದ್ಧ ಸೋತು ಪ್ಲೇ ಆಫ್ ರೇಸ್‌ನಲ್ಲಿ ಹಿಂದುಳಿದ ಮುಂಬೈ

ಶನಿವಾರ, 14 ಮೇ 2016 (11:25 IST)
ಕಿಂಗ್ಸ್  ಇಲೆವನ್ ಪಂಜಾಬ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳಿಂದ ಜಯಗಳಿಸುವ ಮೂಲಕ ತಮ್ಮ ಸೋಲಿನ ಸರಣಿಗೆ ಬ್ರೇಕ್ ಹಾಕಿದೆ. ಮೀಡಿಯಂ ಪೇಸರ್ ಮಾರ್ಕಸ್ ಸ್ಟಾಯಿನಸ್ ಅವರ 4 ವಿಕೆಟ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರುಗಳಲ್ಲಿ 9 ವಿಕೆಟ್‌ಗೆ 124ಕ್ಕೆ ಆಲೌಟಾಯಿತು.
 
ಸ್ಟಾಯಿನಿಸ್ ತಮ್ಮ ನಾಲ್ಕು ಓವರುಗಳ ಪೂರ್ಣ ಕೋಟಾದಲ್ಲಿ 15ಕ್ಕೆ 4 ವಿಕೆಟ್‍ನೊಂದಿಗೆ ಮನೋಜ್ಞ ಬೌಲಿಂಗ್ ಮಾಡಿದರು. ಇದಕ್ಕೆ ಉತ್ತರವಾಗಿ ಕಿಂಗ್ಸ್ ಇಲೆವನ್ ಪಂಜಾಬ್ 3 ಓವರುಗಳು ಬಾಕಿವುಳಿದಿರುವಂತೆ 125 ರನ್ ಗುರಿಯನ್ನು ಮುಟ್ಟಿದರು.  
 ನಾಯಕ ಮುರಳಿ ವಿಜಯ್ 52 ಎಸೆತಗಳಲ್ಲಿ 54 ರನ್ ಮತ್ತು ವೃದ್ಧಿಮಾನ್ ಸಹಾ 40 ಎಸೆತಗಳಲ್ಲಿ 56 ರನ್ ಗಳಿಸಿದರು. 
 ಹಶೀಮ್ ಆಮ್ಲಾ ಅವರ ನಿರ್ಗಮನದ ನಂತರ ಬ್ಯಾಟಿಂಗ್‌ಗೆ ಇಳಿದ ಸಹಾ ಎರಡನೇ ವಿಕೆಟ್‌ಗೆ ವಿಜಯ್ ಜತೆಗೆ ಪಂದ್ಯ ಗೆಲುವಿನ 116 ರನ್ ಜತೆಯಾಟವಾಡಿ 11 ಪಂದ್ಯಗಳಲ್ಲಿ ನಾಲ್ಕನೇ ಜಯವನ್ನು ದಾಖಲಿಸಿದರು. 
 
 ಸಹಾ 38 ಎಸೆತಗಳಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಅರ್ಧಶತಕ ಬಾರಿಸಿದರು. ಕಿಂಗ್ಸ್ ಇಲೆವನ್ ಪಂಜಾಬ್ ಜಯದ ಗುರಿಯತ್ತ ಸಾಗುತ್ತಿದ್ದಂತೆ ಸಹಾ ಮೆಕ್‌ಕ್ಲೆನಾಗೆನ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರೂ ಅದರಿಂದ ಹಾನಿಯೇನೂ ಆಗಲಿಲ್ಲ. ಮ್ಯಾಕ್ಸ್ ವೆಲ್ ಕೂಡ ತಮ್ಮ ಖಾತೆ ತೆರೆಯಲು ವಿಫಲರಾದರು.

ವೆಬ್ದುನಿಯಾವನ್ನು ಓದಿ