ಡಕ್‌ವರ್ತ್ ಲೆವಿಸ್ ನಿಯಮವನ್ನು ಅಸಂಬದ್ಧ ಎಂದು ಕರೆದ ಫ್ಲೆಮಿಂಗ್

ಸೋಮವಾರ, 16 ಮೇ 2016 (20:03 IST)
ಡಕ್‌ವರ್ತ್ ಲೆವಿಸ್ ನಿಯಮದ ಬಗ್ಗೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಕೋಚ್ ಸ್ಟೀಫನ್ ಫ್ಲೆಮಿಂಗ್ ತಮ್ಮ ಸಂಪೂರ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಮಳೆಯಿಂದ ಪೀಡಿತವಾದ ಪಂದ್ಯಗಳಿಗೆ ಐಸಿಸಿ ಅನುಮೋದಿತ ನಿಯಮವು ಅಸಂಬದ್ಧ ಎಂದು ಹೇಳಿ ಕನಿಷ್ಠ ಕಿರುಓವರುಗಳ ಪಂದ್ಯದಲ್ಲಾದರೂ ಬದಲಾವಣೆ ಅಗತ್ಯವಾಗಿದೆ ಎಂದು ನುಡಿದರು.

 ಡಕ್ ವರ್ತ್ ಲೆವಿಸ್ ಅಸಂಬದ್ಧ. ನೀವು ಡಕ್‌ವರ್ತ್‌‍ಗೆ ಇಳಿದಕೂಡಲೇ ಆಟ ಮುಗಿದುಹೋಗಿರುತ್ತದೆ ಎಂದು ಕೆಕೆಆರ್‌ಗೆ 8 ವಿಕೆಟ್‌ಗಳಿಂದ ಸೋತ ಬಳಿಕ ಫ್ಲೆಮಿಂಗ್ ಬೇಸರದಿಂದ ಹೇಳಿದ್ದಾರೆ. 
 
 ಕೊನೆಯ ನಾಲ್ಕು ಬರ್ತ್‌ಗಳಿಗೆ ರೇಸಿನಿಂದ ಹೊರಬಿದ್ದ ಸೂಪರ್ ಜೈಂಟ್ಸ್ ಡಿ/ಎಲ್ ವಿಧಾನದಲ್ಲಿ 9 ಓವರುಗಳಲ್ಲಿ 66 ರನ್ ಡಿಫೆಂಡ್ ಮಾಡಬೇಕಾಯಿತು. ನೈಟ್ ರೈಡರ್ಸ್ ಈ ಗುರಿಯನ್ನು ಕೇವಲ 5 ಓವರುಗಳಲ್ಲಿ ದಾಟಿತು. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ