ಧೋನಿ ಹೆಸರು ಹೇಳಿಕೊಂಡು ಪಂದ್ಯದ ಟಿಕೆಟ್ ಮಾರುತ್ತಿರುವ ಐರ್ಲೆಂಡ್ ಕ್ರಿಕೆಟ್!
ಜೂನ್ 27 ಮತ್ತು 29 ರಂದು ಭಾರತ ಮತ್ತು ಐರ್ಲೆಂಡ್ ನಡುವೆ ಟಿ20 ಸರಣಿ ನಡೆಯಲಿದೆ. ಈ ಪಂದ್ಯ ಭಾರತದಲ್ಲಿ ನಡೆಯುವುದಿದ್ದರೆ ಜನ ಕೂಡಿಕೊಳ್ಳುತ್ತಿದ್ದರು. ಆದರೆ ಇದು ನಡೆಯುತ್ತಿರುವದು ಐರ್ಲೆಂಡ್ ನಲ್ಲಿ.
ಅಲ್ಲಿ ಭಾರತದಷ್ಟು ಕ್ರಿಕೆಟ್ ಕ್ರೇಜ್ ಇಲ್ಲ. ಹೀಗಾಗಿ ಅಲ್ಲಿನ ಕ್ರಿಕೆಟ್ ಮಂಡಳಿ ಜನರನ್ನು ಸೆಳೆಯಲು ಧೋನಿ ಹೆಸರು ಹೇಳಿಕೊಂಡು ಟಿಕೆಟ್ ಮಾರಾಟ ಮಾಡುತ್ತಿದೆ. ಎಂಎಸ್ ಧೋನಿ ಬರುತ್ತಿದ್ದಾರೆ. ಅವರನ್ನು ನೋಡಲು, ಆಡುವುದನ್ನು ನೋಡಲು ಇಂದೇ ನಿಮಗೆ ಅವಕಾಶ ಎಂದು ಟಿಕೆಟ್ ಬುಕ್ ಮಾಡಿಕೊಳ್ಳಲು ಜಾಹೀರಾತು ನೀಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.