ಅತೀ ಸಮೀಪದಿಂದ ಭಾರತದ ಕ್ರಿಕೆಟ್ ಅನುಸರಿಸುವ ಜನರಿಗೆ, ರಾಬಿನ್ ಉತ್ತಪ್ಪಾ ಮತ್ತು ಇರ್ಫಾನ್ ಪಠಾಣ್ ಅತ್ಯುತ್ತಮ ಸ್ನೇಹಿತರು ಎನ್ನುವುದು ಗೊತ್ತಿರುತ್ತದೆ. ಉತ್ತಪ್ಪಾ ಇತ್ತೀಚೆಗೆ ಚಾಟ್ ಶೋವೊಂದರಲ್ಲಿ ತನ್ನ ಮತ್ತು ಇರ್ಫಾನ್ ಪಠಾಣ್ ವಿವಾಹದ ದಿನಾಂಕಗಳು ಒಂದಕ್ಕೊಂದು ಘರ್ಷಿಸದಂತೆ ಯೋಜಿಸಿದ್ದನ್ನು ಬಹಿರಂಗ ಮಾಡಿದ್ದಾರೆ.
ರಾಬಿನ್ ಉತ್ತಪ್ಪಾ ಟೆನ್ನಿಸ್ ಆಟಗಾರ್ತಿ ಶೀತಲ್ ಗೌತಮ್ ಅವರನ್ನು ವಿವಾಹವಾಗಿದ್ದಾರೆ. ಆ ಸಂದರ್ಭದಲ್ಲಿ ಉತ್ತಪ್ಪಾ ಇರ್ಫಾನ್ ಅವರ ಜತೆ ಚರ್ಚಿಸಿ, ನಾನೀಗ ವಿವಾಹವಾಗುತ್ತಿದ್ದೇನೆ. ಇದೇ ಸಮಯದಲ್ಲಿ ನೀನು ವಿವಾಹವಾಗಬೇಡ, ನನ್ನ ವಿವಾಹದ ಸಂದರ್ಭದಲ್ಲಿ ನೀನು ಇರುವುದು ಅಗತ್ಯವಾಗಿದೆ ಎಂದು ಹೇಳಿದೆ. ಬಳಿಕ ನಾವಿಬ್ಬರೂ ಚರ್ಚಿಸಿ ಇರ್ಫಾನ್ ವಿವಾಹ ದಿನಾಂಕವನ್ನು ಸ್ವಲ್ಪ ಮುಂದಕ್ಕೆ ಹಾಕಿದೆವು ಎಂದು ಉತ್ತಪ್ಪಾ ಹೇಳಿದರು.
ಉತ್ತಪ್ಪಾ ಮತ್ತು ಇರ್ಫಾನ್ ನಡುವೆ ಸ್ನೇಹಬಂಧ ಎಷ್ಟು ಗಟ್ಟಿಯಾಗಿದೆಯೆಂದರೆ, ಅವರ ಆಪ್ತ ಸ್ನೇಹಿತರು ಮತ್ತು ಸಹಆಟಗಾರರು ಅವರಿಬ್ಬರನ್ನು ಪತಿ, ಪತ್ನಿಯರೆಂಬಂತೆ ಹಾಸ್ಯ ಮಾಡುತ್ತಿದ್ದರು. ನಾವು ತುಂಬಾ ಆತ್ಮೀಯತೆಯಿಂದ ಇರುತ್ತಿದ್ದೆವು. ನಾವು ಒಟ್ಟಿಗೆ ಆಡುವಾಗ ಮತ್ತು ಇರುವಾಗ ಪತಿ ಮತ್ತು ಪತ್ನಿಯರಂತೆ ಇರುತ್ತಿದ್ದೆವು. ಜನರು ಕೂಡ ಹಾಗೇ ಕರೆಯುತ್ತಿದ್ದರು ಎಂದು ಉತ್ತಪ್ಪಾ ಹೇಳಿದರು.