ಬುಮ್ರಾ ಮಾಡಿದ ಒಂದು ತಪ್ಪು ಫೈನಲ್ ಪಂದ್ಯದ ಗತಿಯನ್ನೇ ಬದಲಿಸಿತು

ಸೋಮವಾರ, 19 ಜೂನ್ 2017 (09:15 IST)
ಓವಲ್`ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ಲಕ್ ಸರಿ ಇರಲಿಲ್ಲ ಅನ್ಸತ್ತೆ. ಟಾಸ್ ಗೆದ್ದ ಬಳಿಕ ಪಂದ್ಯದ ಯಾವುದೇ ಹಂತದಲ್ಲಿ ಭಾರತ ಮೇಲುಗೈ ಸಾಧಿಸಲು ಆಗಲಿಲ್ಲ. ಅದರಲ್ಲೂ ವೇಗಿ ಜಸ್ಪ್ರೀತ್ ಬುಮ್ರಾ ಮಾಡಿದ ಒಂದು ತಪ್ಪು ಫೈನಲ್ ಗತಿಯನ್ನೇ ಬದಲಿಸಿತು.
 

ನಿನ್ನೆಯ ಫೈನಲ್ ಪಂದ್ಯದ 3ನೇ ಓವರ್`ನಲ್ಲಿ ಪಾಕಿಸ್ತಾನದ ಬ್ಯಾಟ್ಸ್`ಮನ್ ಫಖಾರ್ ಜಮಾನ್`ಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದ್ದರು. ಬುಮ್ರಾ ಎಸೆತದಲ್ಲಿ ಫಖಾರ್ ಬ್ಯಾಟ್`ಗೆ ಟಚ್ ಆದ ಬಾಲ್ ಧೋನಿ ಕೈಸೇರಿತ್ತು. ಅಂಪೈರ್ ಸಹ ಔಟ್ ನಿರ್ಧಾರ ಮಾಡಿದ್ದರು. ಆದರೆ, ಡಿಆರ್ಎಸ್`ನಲ್ಲಿ ಬುಮ್ರಾ ನೋಬಾಲ್ ಮಾಡಿರುವುದು ಬೆಳಕಿಗೆ ಬಂತು. ಈ ಜೀವದಾನದ ಲಾಭ ಪಡೆದ  ಫಖಾರ್ ಶತಕ ಸಿಡಿಸಿ ಸಂಭ್ರಮಿಸಿದರು. ಫಖಾರ್ ಸಿಡಿಸಿದ ಶತಕದಿಂದ ಪಾಕಿಸ್ತಾನ 300ರ ಗಡಿ ದಾಟಿತ್ತು.

ಆದರೆ, ಭಾರತದ ಕ್ಯಾಪ್ಟನ್ ಕೊಹ್ಲಿಗೂ ಸಹ ಒಂದು ಜೀವದಾನ ಸಿಕ್ಕಿತ್ತು. ಅಮೀರ್ ಬೌಲಿಂಗ್`ನಲ್ಲಿ ಸ್ಲಿಪ್`ಗೆ ನೀಡಿದ್ದ ಕ್ಯಾಚನ್ನ ಕೈಚೆಲ್ಲಿದ್ದರು. ಆದರೆ, ಮರುಎಸೆತದಲ್ಲೇ ಮತ್ತೊಂದು ಕ್ಯಾಚ್ ನೀಡಿ ಕೊಹ್ಲಿ ಪೆವಿಲಿಯನ್ ಸೇರಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ