ಗಂಡು ಮಗುವಿಗೆ ತಂದೆಯಾದ ಜಸ್ಪ್ರೀತ್ ಬುಮ್ರಾ: ಮಗನಿಗೆ ಚೆಂದದ ಹೆಸರಿಟ್ಟ ದಂಪತಿ

ಸೋಮವಾರ, 4 ಸೆಪ್ಟಂಬರ್ 2023 (15:47 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ-ಸಂಜನಾ ಗಣೇಶನ್ ದಂಪತಿ ಗಂಡು ಮಗುವಿನ ಪೋಷಕರಾಗಿದ್ದಾರೆ.

ಸಂಜನಾಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಈ ಖುಷಿಯ ಸಮಾಚಾರವನ್ನು ಖುದ್ದು ಬುಮ್ರಾ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಏಷ್ಯಾ ಕಪ್ ಆಡುತ್ತಿರುವ ಬುಮ್ರಾ ಪತ್ನಿಯ ಹೆರಿಗೆ ವೇಳೆ ಜೊತೆಯಾಗಲೆಂದೇ ಇಂದಿನ ನೇಪಾಳ ವಿರುದ್ಧದ ಪಂದ್ಯಕ್ಕೆ ಗೈರಾಗಿದ್ದಾರೆ.

ಮಗನ ಮುದ್ದಾದ ಹೆಸರನ್ನೂ ಬುಮ್ರಾ ರಿವೀಲ್ ಮಾಡಿದ್ದಾರೆ. ಮಗನಿಗೆ ಅಂಗದ್ ಜಸ್ಪ್ರೀತ್ ಬುಮ್ರಾ ಎಂದು ಹೆಸರಿಡಲಾಗಿದೆ. ಮಗನ ಕೈ ಹಿಡಿದಿರುವ ಫೋಟೋವೊಂದನ್ನು ಬುಮ್ರಾ ಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ