ವರ್ಷದ ಬಳಿಕ ತಂಡದ ಜೊತೆ ಬುಮ್ರಾ: ಐರ್ಲೆಂಡ್ ವಿಮಾನವೇರಿದ ಟೀಂ ಇಂಡಿಯಾ

ಮಂಗಳವಾರ, 15 ಆಗಸ್ಟ್ 2023 (09:00 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಮುಗಿದ ಬಳಿಕ ಇದೀಗ ಟೀಂ ಇಂಡಿಯಾ ಯುವ ಪಡೆ ಐರ್ಲೆಂಡ್ ನತ್ತ ಪ್ರಯಾಣ ಬೆಳೆಸಿದೆ.

ಆಗಸ್ಟ್ 18 ರಿಂದ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ವರ್ಷದ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡುತ್ತಿರುವ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ.

ವರ್ಷದ ಬಳಿಕ ತಂಡ ಕೂಡಿಕೊಳ್ಳುತ್ತಿರುವ ಬುಮ್ರಾ ಇಂದು ಐರ್ಲೆಂಡ್ ವಿಮಾನವೇರಿದ್ದಾರೆ. ಇನ್ನು ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಅರ್ಷ್ ದೀಪ್ ಸಿಂಗ್ ಸೇರಿದಂತೆ ವಿಂಡೀಸ್ ವಿರುದ್ಧ ಟಿ20 ಸರಣಿ ಆಡಿದ್ದ ಕ್ರಿಕೆಟಿಗರು ಕೆರೆಬಿಯನ್ ನಾಡಿನಿಂದ ನೇರವಾಗಿ ಐರ್ಲೆಂಡ್ ಗೆ ಬಂದಿಳಿಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ