ಏಷ್ಯಾ ಕಪ್ ಗೆ ಟೀಂ ಇಂಡಿಯಾ ಆಯ್ಕೆ: ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಗೆ ಇಂದು ಟೆಸ್ಟ್

ಮಂಗಳವಾರ, 15 ಆಗಸ್ಟ್ 2023 (08:40 IST)
ಬೆಂಗಳೂರು: ಇದೇ ತಿಂಗಳ ಅಂತ್ಯಕ್ಕೆ ಆರಂಭವಾಗಲಿರುವ ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಇಂದು ಅಥವಾ ನೇಳೆ ಭಾರತ ತಂಡದ ಆಯ್ಕೆ ನಡೆಯಲಿದೆ.

ಆಗಸ್ಟ್ 30 ರಿಂದ ಆರಂಭವಾಲಿರುವೇ ಏಷ್ಯಾ ಕಪ್ ಗೆ ರಂದು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಿದೆ. ಆದರೆ ಇದಕ್ಕೆ ಮೊದಲು ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಫಿಟ್ನೆಸ್ ಸಾಬೀತುಪಡಿಸಬೇಕಿದೆ.

ಇಬ್ಬರೂ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಕಾಯುತ್ತಿದ್ದಾರೆ. ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಬ್ಯಾಟಿಂಗ್ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಆದರೆ ತಂಡಕ್ಕೆ ಆಯ್ಕೆಯಾಗಬೇಕಾದರೆ ಎನ್ ಸಿಎಯಿಂದ ಫಿಟ್ನೆಸ್ ಸರ್ಟಿಫಿಕೇಟ್ ಬೇಕು. ಹೀಗಾಗಿ ಇಂದು ಇಬ್ಬರೂ ಆಟಗಾರರು ಫಿಟ್ನೆಸ್ ಪರೀಕ್ಷೆಗೊಳಪಡಲಿದ್ದು, ಇದರಲ್ಲಿ ಪಾಸಾದರೆ ಮಾತ್ರ ಏಷ್ಯಾ ಕಪ್ ಗೆ ತಂಡಕ್ಕೆ ಆಯ್ಕೆಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ