ಸೂರ್ಯಕುಮಾರ್ ಪತ್ನಿ ಜೊತೆ ಕೆಎಲ್ ರಾಹುಲ್ ತುಳು ಸಂಭಾಷಣೆ ವೈರಲ್
ಸೂರ್ಯ ಪತ್ನಿ ದೇವಿಶಾ ಶೆಟ್ಟಿ ಮೂಲತಃ ತುಳುವರು. ಕೆಎಲ್ ರಾಹುಲ್ ಕೂಡಾ ಮಂಗಳೂರು ಮೂಲದವರು. ಹೀಗಾಗಿ ಇಬ್ಬರೂ ಸೂರ್ಯ ಶತಕದ ಬಗ್ಗೆ ತುಳುವಿನಲ್ಲಿ ಹೊಗಳಿದ್ದಾರೆ.
ಸೂರ್ಯ ಶತಕದ ಕ್ಷಣವನ್ನು ಸೆರೆ ಹಿಡಿದ ರಾಹುಲ್ ಭಾರೀ ಲಾಯ್ಕ ಗೊಬ್ಬಿಯಾ (ತುಂಬಾ ಚೆನ್ನಾಗಿ ಆಡಿದೆ) ಎಂದು ಸೂರ್ಯ ಪತ್ನಿಯನ್ನು ಟ್ಯಾಗ್ ಮಾಡಿ ಹೊಗಳಿದ್ದಾರೆ. ಇದಕ್ಕೆ ಸೂರ್ಯ ಪತ್ನಿ ಕೂಡಾ ತುಳುವಿನಲ್ಲೇ ಪ್ರತಿಕ್ರಿಯಿಸಿದ್ದು, ಆರೆಗ್ ಲಾ ತುಳು ಕಲ್ಪಾವೋಡ್ (ಅವರಿಗೂ ತುಳು ಕಲಿಸಬೇಕು) ಎಂದಿದ್ದಾರೆ. ಇವರ ಈ ಇನ್ ಸ್ಟಾಗ್ರಾಂ ಸಂಭಾಷಣೆ ಎಲ್ಲರ ಗಮನ ಸೆಳೆದಿದೆ.