ಲಂಕಾ ಏಕದಿನಕ್ಕೆ ಮೊದಲು ರೋಹಿತ್ ಶರ್ಮಾ ಟೆಸ್ಟ್ ಪಾಸಾಗಬೇಕು!
ರೋಹಿತ್ ಬಾಂಗ್ಲಾದೇಶ ಸರಣಿಯಲ್ಲಿ ಹೆಬ್ಬರಳಿನ ಗಾಯಕ್ಕೊಳಗಾಗಿದ್ದರು. ಇದಾದ ಬಳಿಕ ಟೆಸ್ಟ್ ಸರಣಿಯಲ್ಲಿ ಆಡಿರಲಿಲ್ಲ. ಲಂಕಾ ಟಿ20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಏಕದಿನಕ್ಕೆ ಸರಣಿಗೆ ವಾಪಸಾಗುತ್ತಿದ್ದಾರೆ.
ಆದರೆ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಮುನ್ನ ರೋಹಿತ್ ಫಿಟ್ನೆಸ್ ಪರೀಕ್ಷೆಗೊಳಗಾಗಬೇಕಿದೆ. ಹೀಗಾಗಿ ಗುವಾಹಟಿ ಏಕದಿನಕ್ಕೆ ಮುನ್ನ ರೋಹಿತ್ ಟೆಸ್ಟ್ ಪಾಸು ಮಾಡಬೇಕಿದೆ.